ಬೆಂಗಳೂರು: ಡಿಸೆಂಬರ್ 2023ರ ಒಳಗೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ಸಚಿವ ಭವಿಷ್ಯ ನುಡಿದಿದ್ದಾರೆ. ವಿಕಾಸಸೌಧಲ್ಲಿ ಮಾತನಾಡಿದ ಅವರು, 1994 ರಲ್ಲಿ ರಾಮಕೃಷ್ಣ ಹೆಗಡೆಯವರು ಇದ್ದ ಜಾಗದಲ್ಲಿ ಇಂದು ಸಿದ್ದರಾಮಯ್ಯ ಇದ್ದಾರೆ. ಅಂದು ಹೆಗಡೆಯವರನ್ನು ಸಿಎಂ ಇಬ್ರಾಹಿಂ ಹೊರ ಹಾಕಿದ್ರು. ಈಗ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಇಂದ ಹೊರ ಹಾಕಲು ಸಂಚು ನಡೀತಿದೆ ಎಂದು ಸಚಿವ ಮುನಿರತ್ನ ಆರೋಪಿಸಿದರು.
2023 ರ ಒಳಗೆ ಸಿದ್ದರಾಮಯ್ಯರನ್ನು ಕಾಂಗ್ರೆಸ್ನಿಂದ ಹೊರಹಾಕ್ತಾರೆ. ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಲ್ಲ. ಹಿಂದೆ ರಾಮಕೃಷ್ಣ ಹೆಗಡೆಯವರಿಗೆ ಆಗಿದ್ದ ಸ್ಥಿತಿಯೇ ಸಿದ್ದರಾಮಯ್ಯ ಅವರಿಗೆ ಆಗುತ್ತಿದೆ. ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಹೋಗಿರುವುದೇ ಅದೇ ಕಾರಣಕ್ಕೆ. ಸಿದ್ದರಾಮಯ್ಯನನ್ನು 2023ಕ್ಕೆ ಪಾರ್ಟಿಯಿಂದಲೇ ಸಸ್ಪೆಂಡ್ ಮಾಡಿಸ್ತಾರೆ ನೋಡಿ ಎಂದರು.