ಬೆಂಗಳೂರು:ಬಿಜೆಪಿಗರು ಎಲ್ಲೆಲ್ಲಿ ಟೆಂಡರ್ ಆಗುತ್ತೋ ಅಲ್ಲೆಲ್ಲಾ ಶೇ.8-10 ರಷ್ಟು ಕಮೀಷನ್ ಸಂಗ್ರಹ ಮಾಡ್ತಿದ್ದಾರೆ. ಇದು ಕಮಿಷನ್ ಸರ್ಕಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ರೇಸ್ ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸೇವಾದಳ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು,ಬಿಜೆಪಿ ಸರ್ಕಾರ ರೂರಲ್ ಡೆವಲಪ್ಮೆಂಟ್ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಎಲ್ಲೆಲ್ಲಿ ಟೆಂಡರ್ ಆಗುತ್ತೋ ಅಲ್ಲೆಲ್ಲ ಶೇ. 8-10ರಷ್ಟು ಕಮೀಷನ್ ಸಂಗ್ರಹ ಮಾಡ್ತಿದೆ. ಅಪ್ಪರ್ ಭದ್ರಾ ಕೇಂದ್ರ ಸರ್ಕಾರದ ಯೋಜನೆಯಲ್ಲೂ ವಿಜಯೇಂದ್ರನೇ ಕಲೆಕ್ಟ್ ಮಾಡ್ತಿದಾರೋ ಇಲ್ಲ ಬೇರೆಯವರು ಕಮಿಷನ್ ಕಲೆಕ್ಟ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಇದು ಶೇ.8-10 ಕಮಿಷನ್ ಸರ್ಕಾರ ಅನ್ನೋದು ಗೊತ್ತಿರುವ ವಿಚಾರವೇ ಎಂದು ವಾಗ್ದಾಳಿ ನಡೆಸಿದರು.