ಕರ್ನಾಟಕ

karnataka

ETV Bharat / city

ಭಾರತ್ ಸ್ಕೌಟ್ಸ್ ಆ್ಯಂಡ್​ ಗೈಡ್ಸ್ ವತಿಯಿಂದ ಅರುಣ್ ಜೇಟ್ಲಿಗೆ ಶ್ರದ್ಧಾಂಜಲಿ - ಸುರೇಶ್ ಕುಮಾರ್

ಅರುಣ್ ಜೇಟ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತೀಕ್ಷ್ಣವಾಗಿ ಮಾತನಾಡಿದ್ದಾರೆ. ಆದರೆ ಅದನ್ನು ಯಾರೂ ವೈಯಕ್ತಿಕವಾಗಿ ಸ್ವೀಕರಿಸಿಲ್ಲ. ಅವರು ಅಜಾತ ಶತ್ರು. ಜೊತೆಗೆ ಕಾಲಕಾಲಕ್ಕೆ ಪತ್ರಿಕಾಗೋಷ್ಟಿ ನಡೆಸಿ ಒಂದೂ ವಿವಾದಕ್ಕೆ ಆಸ್ಪದ ನೀಡಲಿಲ್ಲ. ಜೇಟ್ಲಿ ಅವರಿಗೆ ದೊಡ್ಡ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶವಿದ್ದರೂ, ಮೋದಿಯವರನ್ನು ಬಿಂಬಿಸಿದ್ದು ಅವರ ದೊಡ್ಡಗುಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್ ಜೇಟ್ಲಿಯವರನ್ನು ಗುಣಗಾನ ಮಾಡಿದ್ರು.

ಅರುಣ್ ಜೇಟ್ಲಿಗೆ ಶ್ರದ್ಧಾಂಜಲಿ

By

Published : Aug 29, 2019, 9:09 AM IST

ಬೆಂಗಳೂರು:ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರಿಗೆ, ಭಾರತ್ ಸ್ಕೌಟ್ಸ್ ಆ್ಯಂಡ್​ ಗೈಡ್ಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್, ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯ, ಪತ್ರಕರ್ತ ಶೈಲೇಶ್ ಚಂದ್ರ ಗುಪ್ತ, ಮಹಿಮಾ ಪಟೇಲ್ ಸೇರಿದಂತೆ ಹಲವು ಮುಖಂಡರು ಪುಷ್ಪವನ್ನು ಅರ್ಪಿಸಿದರು.

ಅರುಣ್ ಜೇಟ್ಲಿಗೆ ಶ್ರದ್ಧಾಂಜಲಿ

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇತ್ತೀಚೆಗೆ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನವಾದ್ರು. ಇದಾದ 20 ದಿನಗಳಲ್ಲಿ ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ಬಹಳ ನೋವಾಯಿತು. ಅರುಣ್ ಜೇಟ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತೀಕ್ಷ್ಣವಾಗಿ ಮಾತನಾಡಿದ್ದರು. ಆದ್ರೆ ಅದನ್ನು ಯಾರೂ ವೈಯಕ್ತಿಕವಾಗಿ ಸ್ವೀಕರಿಸಿಲ್ಲ. ಅವರು ಅಜಾತ ಶತ್ರು. ಜೊತೆಗೆ ಕಾಲಕಾಲಕ್ಕೆ ಪತ್ರಿಕಾಗೋಷ್ಟಿ ನಡೆಸಿ ಒಂದೂ ವಿವಾದಕ್ಕೆ ಆಸ್ಪದ ನೀಡಲಿಲ್ಲ. ಜೇಟ್ಲಿ ಅವರಿಗೆ ದೊಡ್ಡ ನಾಯಕನಾಗಿ ಬೆಳೆಯುವ ಎಲ್ಲಾ ಅವಕಾಶ ದೊರಕಿತ್ತು. ಆದರೆ ಅವರು ನರೇಂದ್ರ ಮೋದಿಯವರನ್ನು ಬಿಂಬಿಸಿದ್ದು, ಅವರ ದೊಡ್ಡಗುಣ ಎಂದು ಜೇಟ್ಲಿಯವರನ್ನು ಗುಣಗಾನ ಮಾಡಿದ್ರು.

ABOUT THE AUTHOR

...view details