ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ವಿಲನ್ ಕುಮುದಾ ಆಗಿ ಅಭಿನಯಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದ ಅನಿಕಾ ಸಿಂಧ್ಯಾ. ಕೊರೊನಾ ಮಹಾಮಾರಿಯ ಕಾರಣದಿಂದಾಗಿ ನಟನೆಯಿಂದ ಕೊಂಚ ಗ್ಯಾಪ್ ತೆಗೆದುಕೊಳ್ಳುವುದು ಅನಿವಾರ್ಯ. ಇದೀಗ ನಟಿ ಅನಿಕಾ ಸಿಂಧ್ಯಾ ಕೂಡಾ ಹಲವು ತಿಂಗಳುಗಳ ಗ್ಯಾಪ್ ನಂತರ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ.
ಏಳು ತಿಂಗಳ ನಂತರ 'ಪ್ರೇಮಲೋಕ'ಕ್ಕೆ ಮರಳಿದ ನಟಿ ಅನಿಕಾ ಸಿಂಧ್ಯಾ ಲಾಕ್ ಡೌನ್ ಕಾರಣದಿಂದಾಗಿ ಸುಮಾರು ಏಳು ತಿಂಗಳುಗಳ ಕಾಲ ಮನೆಯಲ್ಲಿಯೇ ಇದ್ದ ಸಿಂಧ್ಯಾ ಇದೀಗ ಮತ್ತೆ ಬಣ್ಣದ ಲೋಕದತ್ತ ಮರಳಿದ್ದಾರೆ. ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯಕಾಂತ್ ಅಕ್ಕನಾಗಿ ಕಾಣಿಸಿಕೊಂಡಿದ್ದರು. ಬೆಳಗಿನ ಜಾವ ಶೂಟಿಂಗ್ ಗೆ ಮಾಸ್ಕ್ ಧರಿಸಿ ಪ್ರಯಾಣಿಸುವ ಅನಿಕಾ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಶೂಟಿಂಗ್ ನ ವೇಳೆಯಲ್ಲಿಯೂ ಅನುಸರಿಸಬೇಕಾದ ಮುಂಜಾಗರೂಕತಾ ಕ್ರಮಗಳನ್ನು ತಪ್ಪದೇ ಅನಿಕಾ ಪಾಲಿಸುತ್ತಾರೆ.
ಏಳು ತಿಂಗಳ ನಂತರ 'ಪ್ರೇಮಲೋಕ'ಕ್ಕೆ ಮರಳಿದ ನಟಿ ಅನಿಕಾ ಸಿಂಧ್ಯಾ ಲಾಕ್ ಡೌನ್ ಸಮಯದಲ್ಲಿ ಮನೆಯವರೊಂದಿಗೆ ಕಳೆದಿರುವ ಅನಿಕಾ ಈ ಸಮಯವನ್ನು ಸಕತ್ ಎಂಜಾಯ್ ಮಾಡಿದ್ದಾರೆ. ಬರೋಬ್ಬರಿ ಏಳು ತಿಂಗಳುಗಳ ಕಾಲ ನಟನೆಯಿಂದ ದೂರವಿದ್ದುದಕ್ಕೆ ಜಾಸ್ತಿಯೇ ಬೇಜಾರ್ ಆಗಿತ್ತು. ತಾಯಿಗೆ ಮನೆಕೆಲಸದಲ್ಲಿ ನೆರವಾದೆ. ಇದರ ಜೊತೆಗೆ ಮುದ್ದಿನ ತಮ್ಮನೊಂದಿಗೆ ಜಗಳವಾಡಲು ತುಂಬಾ ಸಮಯ ದೊರಕಿತ್ತು. ಇದರ ಹೊರತಾಗಿ ಮುದ್ದಿನ ನಾಯಿಯೊಂದಿಗೆ ಆಟವಾಡುತ್ತಾ ಲಾಕ್ ಡೌನ್ ಸಮಯವನ್ನು ಕಳೆದೆ ಎನ್ನುತ್ತಾರೆ ಅನಿಕಾ ಸಿಂಧ್ಯಾ.
ಏಳು ತಿಂಗಳ ನಂತರ 'ಪ್ರೇಮಲೋಕ'ಕ್ಕೆ ಮರಳಿದ ನಟಿ ಅನಿಕಾ ಸಿಂಧ್ಯಾ ಇದೇ ನೆಪದಲ್ಲಿ ತಮ್ಮ ಊರಿಗೂ ಭೇಟಿ ಕೊಟ್ಟಿರುವ ಅನಿಕಾ ಬಹಳ ಸಂತಸಗೊಂಡಿದ್ದರು. ತುಂಬಾ ಸಮಯದ ನಂತರ ತಮ್ಮ ಊರಿಗೆ ಭೇಟಿ ಕೊಟ್ಟ ಅವರು ತಮ್ಮ ಸೊಗಸಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ನನಗೆ ನಿಜವಾಗಲೂ ಅತ್ಯಗತ್ಯವಾದ ಬ್ರೇಕ್ ಇದು. ನನ್ನ ಬ್ಯುಸಿ ಶೆಡ್ಯೂಲ್ ನಲ್ಲಿ ನನಗೆ ಕೆಲವು ವರುಷಗಳಿಂದ ಕುಟುಂಬದವರ ಜೊತೆ ಹಾಗೂ ಊರಿನಲ್ಲಿ ಕಾಲ ಕಳೆಯುವ ಅವಕಾಶ ಸಿಕ್ಕಿರಲಿಲ್ಲ. ಈ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಂಡೆ " ಎಂದಿದ್ದಾರೆ.