ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಅಕ್ಟೋಬರ್​ನಿಂದ ಶುರುವಾಗಲಿದ್ಯಾ ಶಾಲಾ-ಕಾಲೇಜು..!!

ಅಕ್ಟೋಬರ್ ತಿಂಗಳಿನಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಲಿರುವುದಾಗಿ ಉನ್ನತ ಮೂಲಗಳು ಖಚಿತ ಪಡಿಸಿವೆ. ಇದರಿಂದಾಗಿ ಈಗಾಗಲೇ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳು ಅಕ್ಟೋಬರ್​ನಿಂದ ಪ್ರಾರಂಭವಾಗುವ ಮೂನ್ಸೂಚನೆ ಸಿಕ್ಕಿದಂತಾಗಿದೆ.

school-and-colleges-in-the-state-will-start-from-october
ಶಾಲಾ ಕಾಲೇಜು ಆರಂಭ

By

Published : Aug 25, 2020, 9:34 PM IST

ಬೆಂಗಳೂರು:ಸೆಪ್ಟೆಂಬರ್​ವರೆಗೆ ಆನ್ ಲೈನ್ ತರಗತಿಗಳು ನಡೆಯಲಿದ್ದು, ಬಳಿಕ ಅಕ್ಟೋಬರ್ ನಿಂದ ಶಾಲಾ-ಕಾಲೇಜುಗಳು ಆರಂಭವಾಗಲಿರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಉನ್ನತ ಮೂಲಗಳು ಖಚಿತ ಪಡಿಸಿವೆ.

ಈಗಾಗಲೇ ರಾಜ್ಯದಲ್ಲಿ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳು ಕೋವಿಡ್​​ ಭೀತಿಯಿಂದ ಸ್ಥಗಿತವಾಗಿವೆ. ಈ ನಡುವೆ ಜುಲೈನಲ್ಲಿ ಆರಂಭ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ, ಜೂನ್​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ, ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆ ನಡೆಸಬೇಕಾಗಿತ್ತು.

ಹೀಗಾಗಿಯೇ ಜುಲೈ ಮೊದಲ ವಾರದಲ್ಲಿ ಶಾಲೆಗಳನ್ನ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ದಿಢೀರ್ ಅಂತ ಕೊರೊನಾ‌ ಸೋಂಕಿರತ ಸಂಖ್ಯೆ ಹೆಚ್ಚಾದ ಕಾರಣ ಸೆಪ್ಟೆಂಬರ್​ನಲ್ಲಿ ಆರಂಭವಾಗಲಿದೆ ಅಂತ ಅಂದಾಜಿಸಲಾಗಿತ್ತು. ಆದರೆ‌ ಇದೀಗ ಸೆಪ್ಟೆಂಬರ್​ವರೆಗೆ ಆನ್ ಲೈನ್ ಕ್ಲಾಸ್​ಗಳು ನಡೆಯಲಿವೆ. ನಂತರ ಅಕ್ಟೋಬರ್​ನಿಂದ ಶಾಲಾ-ಕಾಲೇಜು ಆರಂಭವಾಗಲಿರುವುದಾಗಿ ಉನ್ನತ ಮೂಲಗಳು ಖಚಿತ ಪಡಿಸಿವೆ.

ಅಲ್ಲದೆ ಈಗಾಗಲೇ ಶಾಲಾ-ಕಾಲೇಜುಗಳು ಆನ್ ಲೈನ್ ಪಾಠ ಪ್ರವಚನ ಆರಂಭಿಸಿವೆ. ಇದೀಗ ಶಾಲಾ-ಕಾಲೇಜು ಆರಂಭವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸೆಪ್ಟೆಂಬರ್​ಗೆ ಅನ್ ಲಾಕ್ -3 ಮುಗಿಯಲಿದ್ದು, 4 ಶುರುವಾಗಲಿದೆ. ‌ಹೀಗಾಗಿ ಎಲ್ಲರ ಚಿತ್ತ ಕೇಂದ್ರ ಸರ್ಕಾರದ ನಿರ್ಧಾರದತ್ತ ನೆಟ್ಟಿದೆ.

ABOUT THE AUTHOR

...view details