ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡು ಪೊಲೀಸ್ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿಯನ್ನು ಸತತ ಮೂರು ಗಂಟೆಗಳ ಕಾಲ ಸಿಸಿಬಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮಹಿಳಾ ಸ್ವಾಂತನ ಕೇಂದ್ರದಲ್ಲಿರುವ ರಾಗಿಣಿಯನ್ನು ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ಹಾಗೂ ಅಂಜುಮಾಲ ನಾಯಕ್ ನೇತೃತ್ವದಲ್ಲಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಪ್ರಕರಣದಲ್ಲಿ ಬಂಧಿತರಾಗಿರುವ ರವಿಶಂಕರ್, ರಾಹುಲ್, ಪ್ರಶಾಂತ್ ರಾಂಕಾ, ಲೂಮ್ ಪೆಪ್ಪರ್ ಸೈಮನ್ ಅವರ ಸಂಪರ್ಕದ ಬಗ್ಗೆ ಪ್ರಶ್ನಿಸಿದ್ದಾರೆ. ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ರಾಗಿಣಿ, ಪಾರ್ಟಿ ಸಮಯದಲ್ಲಿ ಭೇಟಿಯಾಗಿರಬಹುದು ನನಗೆ ನೆನಪಿಲ್ಲ ಎಂದಿರುವುದಾಗಿ ತಿಳಿದು ಬಂದಿದೆ.
ಕೆಪಿಎಲ್ ಕ್ರಿಕೆಟಿಗರಿಗೂ ಡ್ರಗ್ಸ್ ಹಂಚಿದ್ರಾ ರಾಗಿಣಿ..?
ಕರ್ನಾಟಕ ಪ್ರೀಮಿಯರ್ ಲೀಗ್ನ ಬಳ್ಳಾರಿ ಟಸ್ಕರ್ಸ್ ತಂಡದ ಸಹ ಮಾಲೀಕತ್ವ ಹೊಂದಿದ್ದ ರಾಗಿಣಿ, ಉದ್ಯಮಿ ತಂಡದ ಮಾಲೀಕ ಅರವಿಂದ್ ರೆಡ್ಡಿ ಜೊತೆ ಗುರುತಿಸಿಕೊಂಡಿದ್ದರು. ಫಿಕ್ಸಿಂಗ್ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ. ಎಂ. ಗೌತಮ್, ಅಬ್ರಾರ್ ಖಾಜಿಯನ್ನ ಸಿಸಿಬಿ ಬಂಧಿಸಿತ್ತು.
ಕೆಪಿಎಲ್ ಕ್ರಿಕೆಟ್ ವೇಳೆ ರಾಗಿಣಿ... ಬಳ್ಳಾರಿ ತಂಡ ಸೇರಿದಂತೆ ಬಹುತೇಕ ಆಟಗಾರರು ರಾಗಿಣಿ ಆಪ್ತರಾಗಿದ್ದರು. ಪಂದ್ಯ ಮುಗಿದ ಬಳಿಕ ಸೆಲೆಬ್ರೇಶನ್ ಪಾರ್ಟಿಗಳಲ್ಲಿಯೂ ಭಾಗವಹಿಸುತ್ತಿದ್ದ ರಾಗಿಣಿ ಕೆಪಿಎಲ್ ಆಟಗಾರರಿಗೂ ಡ್ರಗ್ಸ್ ಸರಬರಾಜು ಮಾಡಿರಬಹುದಾದ ಶಂಕೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಆಯಮಾದಲ್ಲಿಯೂ ತನಿಖೆ ನಡೆಸಲು ಸಿಸಿಬಿ ಸಿದ್ಧತೆ ನಡೆಸಿಕೊಂಡಿದ್ದಾರೆ.