ಕರ್ನಾಟಕ

karnataka

ETV Bharat / city

'ನೋಡಲ್ ಅಧಿಕಾರಿ ಮಿಸ್ಸಿಂಗ್' : ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಶಾಸಕ ರಿಜ್ವಾನ್ ಅರ್ಷದ್ - ಬೆಡ್ ಹಾಗೂ ರೆಮ್ಡಿಸಿವರ್ ಇಂಜೆಕ್ಷನ್ ಕೊರತೆ

ಅಧಿಕಾರಿ ನೇಮಕವಾಗಿದಾಗಿನಿಂದ ಶಾಸಕನಾಗಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಅಸಾಧ್ಯವಾಗಿದೆ. ಫೋನ್ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ರಿಜ್ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

rizwan-arshad-complaints-against-nodal-officer
'ನೋಡಲ್ ಅಧಿಕಾರಿ ಮಿಸ್ಸಿಂಗ್': ದೂರು ದಾಖಲಿಸಿದ ಶಾಸಕ ರಿಜ್ವಾನ್ ಅರ್ಷದ್

By

Published : May 7, 2021, 5:35 PM IST

Updated : May 7, 2021, 6:06 PM IST

ಬೆಂಗಳೂರು : ಕಳೆದ ಎರಡು ತಿಂಗಳಿಂದ ಕೊರೊನಾ ಎರಡನೇ ಅಲೆ ತೀವ್ರಗೊಂಡಿದೆ. ರೆಮ್ಡಿಸಿವರ್ ಇಂಜೆಕ್ಷನ್​ಗಳು ಕಾಳಸಂತೆಯಲ್ಲಿ ಎಗ್ಲಿಲ್ಲದೆ ಮಾರಾಟವಾಗುತ್ತಿವೆ.

ಇಂತಹ ಅವ್ಯವಹಾರಗಳನ್ನು ತಡೆದು ಆಸ್ಪತ್ರೆಗಳೊಂದಿಗೆ ಸಮನ್ವಯತೆ ಸಾಧಿಸಲು ರಾಜ್ಯ ಸರ್ಕಾರ ಬೆಂಗಳೂರಿಗಾಗಿಯೇ ನಿಯೋಜಿಸಿದ್ದ ನೋಡಲ್ ಅಧಿಕಾರಿ ಕಾಣೆಯಾಗಿದ್ದಾರೆ ಎಂದು ಆರೋಪಿಸಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಸಕ ರಿಜ್ವಾನ್ ಅರ್ಷದ್

ಕೊರೊನಾ ಬಂದು ಎರಡು ತಿಂಗಳಾಗಿವೆ. ಈಗಲೂ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ರೆಮ್ಡಿಸಿವರ್ ಇಂಜೆಕ್ಷನ್ ಅಭಾವ ತಲೆದೂರಿದೆ. ಪ್ರಮುಖವಾಗಿ ರೆಮ್ಡಿಸಿವರ್ ಇಂಜೆಕ್ಷನ್ ಕೊರತೆಯಾಗದಂತೆ ತಡೆಯಲು ಕಳೆದ ತಿಂಗಳು 17ರಂದು ಕೆಂಪಯ್ಯ ಸುರೇಶ್ ಎಂಬುವರನ್ನು ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನಿಯೋಜಿಸಿತ್ತು‌.

ಅಧಿಕಾರಿ ನೇಮಕವಾಗಿದಾಗಿನಿಂದ ಶಾಸಕನಾಗಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಅಸಾಧ್ಯವಾಗಿದೆ. ಫೋನ್ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ರಿಜ್ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪುದುಚೇರಿ ನೂತನ ಸಿಎಂ ಆಗಿ ಎನ್​.ರಂಗಸ್ವಾಮಿ ಅಧಿಕಾರ ಸ್ವೀಕಾರ

ಎಂಎಲ್ಎ ಆಗಿ ನೋಡಲ್ ಆಫೀಸರ್​ನ ಭೇಟಿಯಾಗಲು ಸಾಧ್ಯವಾಗ್ತಿಲ್ಲ ಎಂದರೆ ಹೇಗೆ?. ನಾನು 25 ದಿನಗಳಿಂದಲೂ ಸಂಪರ್ಕಕ್ಕೆ‌ ಪ್ರಯತ್ನ ಮಾಡುತ್ತಿದ್ದೇನೆ. ಆ ನೋಡಲ್ ಆಫೀಸರ್ ಸಿಕ್ತಿಲ್ಲ. ಅವರು ಬ್ಲಾಕ್ ಮಾರ್ಕೆಟ್​​ನವರ ಜೊತೆ ಶಾಮೀಲಾಗಿದ್ದಾರಾ ಎಂಬ ಅನುಮಾನ ಬರುತ್ತಿದೆ‌‌‌‌‌. ಕಾಣೆಯಾಗಿರುವ ಅವರನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದೇನೆ ಎಂದರು.

ವಿರೋಧ ಪಕ್ಷದವನಾದ ನನ್ ಕೈಗೆ ಸಿಕ್ತಾರಾ..?

ಯಾವುದಕ್ಕೂ ಸಿದ್ಧತೆ ಮಾಡದೆ ಜನರನ್ನು ಬೀದಿಲಿ ಸಾಯೋಕೆ ಬಿಟ್ಟಿದ್ದಾರೆ. ಒಬ್ಬ ಶಾಸಕನಾಗಿ ದೂರು ಕೊಡೋಕೆ ಬಂದಿದ್ದೇನೆ ಎಂದರೆ ಸಮಸ್ಯೆ ತೀವ್ರತೆ ನೋಡಬೇಕು. ಬೆಳಗ್ಗೆಯಿಂದ ರೆಮ್ಡಿಸಿವಿರ್ ಇಂಜೆಕ್ಷನ್ ಕೊಡಿಸಿ ಎಂದು ಕ್ಷೇತ್ರದ ಮತದಾರರು ಕೇಳುತ್ತಿದ್ದಾರೆ. ಸಂಬಂಧಪಟ್ಟ ನೋಡಲ್ ಅಧಿಕಾರಿ ಸಿಕ್ತಿಲ್ಲ. ನಮ್ಮ ಹೈ ಪ್ರೊಫೈಲ್ ಆರೋಗ್ಯ ಸಚಿವರ ಕೈಗೆ ಸಿಕ್ತಿಲ್ಲ, ಅವರ ಪಕ್ಷದವರಿಗೇ ಅವರು ಸಿಕ್ತಿಲ್ಲ. ಇನ್ನು ವಿರೋಧ ಪಕ್ಷದವನಾದ ನನ್ನ ಕೈಗೆ ಸಿಕ್ತಾರ ಎಂದು ಲೇವಡಿ ಮಾಡಿದ್ದಾರೆ‌.

ಸರ್ಕಾರ ಏನ್ ಕತ್ತೆ ಕಾಯ್ತಿದೆಯಾ..?

ತೇಜಸ್ವಿ ಸೂರ್ಯ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ ಬೀದಿಯಲ್ಲಿ ಜನ ಸಾಯುತ್ತಿದ್ದಾರೆ‌‌. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಂದೂ, ಮುಸ್ಲಿಂ ಎಂದು ಮಾತಾಡ್ತಿದ್ದಿರಾ? ನಿಮಗೆ ಆತ್ಮಸಾಕ್ಷಿ ಇದೆಯಾ? ಎಂದು ರಿಜ್ವಾನ್ ಪ್ರಶ್ನಿಸಿದ್ದಾರೆ.

ಒಬ್ಬ ದರೋಡೆಕೋರ ಅಂದ್ರೆ ಹಿಂದೂ ಕಳ್ಳ, ಮುಸ್ಲಿಂ ಕಳ್ಳ ನೋಡೋಕಾಗುತ್ತಾ ? ನಿಮ್ಮಿಂದಾಗಿ ಕಾಲ್ ಸೆಂಟರ್​​ನಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ಸಿಬ್ಬಂದಿ ಕೆಲಸ‌ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೀವು ಏನ್ ಮಾಡೋಕೆ ಹೋಗಿದ್ದೀರಿ ವಾರ್ ರೂಮ್​​ಗೆ..? ಬಿಬಿಎಂಪಿಯಿಂದ ಹಿಡಿದು ಕೇಂದ್ರದವರೆಗೆ ಬಿಜೆಪಿ ಸರ್ಕಾರ ಕೈಯಲ್ಲಿದೆ‌. ವಾರ್ ರೂಂನಲ್ಲಿ ಮುಸ್ಲಿಂ ಹುಡುಗರು ಅಲ್ಲಿ ಏನ್ ಮಾಡೋಕಾಗುತ್ತೆ ? ನಿಮ್ಮ ಸರ್ಕಾರ ಏನ್ ಕತ್ತೆ ಕಾಯುತ್ತಿದ್ದೆಯಾ ? ಈ ಕೊರೊನಾ ಮುಸ್ಲಿಂ, ಹಿಂದೂ ಅಂತ ನೋಡಲ್ಲ. ನೀವು ಕೋಮುವಾದದ ರಾಜಕಾರಣ ಮಾಡುತ್ತಿದ್ದೀರಿ ಎಂದು ರಿಜ್ವಾನ್ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Last Updated : May 7, 2021, 6:06 PM IST

ABOUT THE AUTHOR

...view details