ಕರ್ನಾಟಕ

karnataka

ETV Bharat / city

ಶೇವಿಂಗ್ ಇಲ್ಲ, ಖಾಕಿ ಬಟ್ಟೆ ಸ್ವಚ್ಛ ಇಲ್ಲ.. ಅಶಿಸ್ತಿನಿಂದ ಕಾನ್‌ಸ್ಟೇಬಲ್ ವಿರುದ್ಧ ಡಿಸಿಪಿಗೆ ವರದಿ..

ಗೋಪಾಲಕೃಷ್ಣ ಕರ್ತವ್ಯದಲ್ಲಿ ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ. ಕರ್ತವ್ಯಕ್ಕೆ ಬರುವಾಗ ಶಿಸ್ತಿನಿಂದ ಇರುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ಬೇಜವಾಬ್ದಾರಿ ತೋರಿದ ಹಿನ್ನೆಲೆ ಉತ್ತರ ವಿಭಾಗದ ಡಿಸಿಪಿಗೆ ಶಿಸ್ತು ಕ್ರಮ ಜರಗಿಸುವಂತೆ ಆರ್‌.ಟಿ.ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ..

Report to DCP against Constable in Bengaluru, indiscipline Constable in Bengaluru, Bengaluru vv puram police station, Bengaluru news, ಬೆಂಗಳೂರಿನಲ್ಲಿ ಅಶಿಸ್ತು ಕಾನ್‌ಸ್ಟೆಬಲ್, ಬೆಂಗಳೂರಿನಲ್ಲಿ ಅಶಿಸ್ತು ತೋರಿದ ಕಾನ್‌ಸ್ಟೆಬಲ್ ವಿರುದ್ಧ ಡಿಸಿಪಿಗೆ ವರದಿ, ಬೆಂಗಳೂರು ವಿವಿ ಪುರಂ ಪೊಲೀಸ್ ಠಾಣೆ, ಬೆಂಗಳೂರು ಸುದ್ದಿ
ಅಶಿಸ್ತಿನಿಂದ ಕರ್ತವ್ಯಕ್ಕೆ ಹಾಜರಾಗುವ ಕಾನ್‌ಸ್ಟೇಬಲ್ ವಿರುದ್ಧ ಡಿಸಿಪಿಗೆ ವರದಿ

By

Published : Apr 8, 2022, 9:29 AM IST

Updated : Apr 8, 2022, 10:34 AM IST

ಬೆಂಗಳೂರು :ಶೇವಿಂಗ್ ಮಾಡಿಕೊಳ್ಳದೆ, ಕೊಳಕು ಬಟ್ಟೆ ಧರಿಸಿ ಕರ್ತವ್ಯಕ್ಕೆ ಹಾಜರಾಗಿ, ಶಿಸ್ತಿನ ಬಗ್ಗೆ ಉದಾಸೀನ ತೋರಿದ ಪೊಲೀಸ್ ಕಾನ್ಸ್​ಟೇಬಲ್ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೋರಿ ಉತ್ತರ ವಿಭಾಗದ ಡಿಸಿಪಿಗೆ ಆರ್‌ಟಿನಗರ ಠಾಣೆ ಇನ್ಸ್​ಪೆಕ್ಟರ್ ವರದಿ ಸಲ್ಲಿಸಿದ್ದಾರೆ.

ಓದಿ:ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು ನಾನ್ ಕಾಗ್ನಿಸೆಬಲ್ ಪ್ರಕರಣ ತನಿಖೆ ಮಾಡುವಂತಿಲ್ಲ: ಹೈಕೋರ್ಟ್

ವಿ.ವಿ.ಪುರಂ‌‌ ಪೊಲೀಸ್ ಕಾನ್ಸ್​ಟೇಬಲ್​ ಆಗಿರುವ ಗೋಪಾಲಕೃಷ್ಣ ವಿಶೇಷ ಕರ್ತವ್ಯದ ಮೇರೆಗೆ ಆರ್‌‌.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸ ಬಳಿ ಭದ್ರತೆಗೆ ನೇಮಿಸಲಾಗಿತ್ತು‌‌.‌ ಭದ್ರತೆಯ ತಪಾಸಣೆ ನಡೆಸುವಾಗ ಕಾನ್ಸ್​ಟೇಬಲ್ ಗೋಪಾಲಕೃಷ್ಣ ಶೇವಿಂಗ್ ಮಾಡಿಕೊಳ್ಳದೆ, ಕೊಳಕಾದ ಸಮವಸ್ತ್ರ ಧರಿಸಿಕೊಂಡು‌ ಕರ್ತವ್ಯಕ್ಕೆ ಹಾಜರಾಗಿರುವುದು ಕಂಡು ಬಂದಿದೆ.

ಓದಿ:ಪತ್ರಕರ್ತರು ಸೇರಿದಂತೆ 8 ಮಂದಿಯನ್ನು ಅರೆನಗ್ನಗೊಳಿಸಿ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಥಳಿತ

ಗೋಪಾಲಕೃಷ್ಣ ಕರ್ತವ್ಯದಲ್ಲಿ ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ. ಕರ್ತವ್ಯಕ್ಕೆ ಬರುವಾಗ ಶಿಸ್ತಿನಿಂದ ಇರುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ಬೇಜವಾಬ್ದಾರಿ ತೋರಿದ ಹಿನ್ನೆಲೆ ಉತ್ತರ ವಿಭಾಗದ ಡಿಸಿಪಿಗೆ ಶಿಸ್ತು ಕ್ರಮ ಜರಗಿಸುವಂತೆ ಆರ್‌.ಟಿ.ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ.

Last Updated : Apr 8, 2022, 10:34 AM IST

ABOUT THE AUTHOR

...view details