ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸೇರಿದ್ದ ಪಿ. ರಮೇಶ್ ಜೆಡಿಎಸ್ಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರಲ್ಲಿ ಜೆಡಿಎಸ್ಗೆ ಬಿಗ್ ಶಾಕ್... ಪಿ.ರಮೇಶ್ ರಾಜೀನಾಮೆ!
ಜೆಡಿಎಸ್ ಪಕ್ಷದಲ್ಲಿ ಜಾತ್ಯತೀತ ವ್ಯವಸ್ಥೆಗಿಂತ ಜಾತಿಯ ವ್ಯವಸ್ಥೆಯೇ ಹೆಚ್ಚಾಗಿದೆ. ಬೇಸತ್ತ ಜೆಡಿಎಸ್ ಮುಖಂಡ ಪಿ.ರಮೇಶ್ ಯಿಂದ ರಾಜೀನಾಮೆ.
ಕಾಂಗ್ರೆಸ್ನಲ್ಲಿದ್ದ ರಮೇಶ್ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿದ್ದರು. ಕಳೆದ ಚುನಾವಣೆಯಲ್ಲಿ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಜೆಡಿಎಸ್ ಪಕ್ಷದಲ್ಲಿ ಜಾತ್ಯತೀತ ವ್ಯವಸ್ಥೆಗಿಂತ ಜಾತಿಯ ವ್ಯವಸ್ಥೆಯೇ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ರಮೇಶ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಒಂದು ಜಾತ್ಯತೀತ ಪಕ್ಷ ಎಂದು ತಿಳಿದಿದ್ದೆ. ಆದರೆ, ಅಲ್ಲಿ ಜಾತೀಯತೆಯೇ ಹೆಚ್ಚಾಗಿದೆ. ಅಷ್ಟೇ ಅಲ್ಲ ಪಕ್ಷದೊಳಗೆ ಕುಟುಂಬ ರಾಜಕಾರಣ ವಿಪರೀತವಾಗಿದೆ. ಇದೆಲ್ಲದರಿಂದ ಬೇಸತ್ತು ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.