ಬೆಂಗಳೂರು: ಮೇಕೆದಾಟು ಯೋಜನೆ, ಮಹಾದಾಯಿ ಯೋಜನೆ ಶೀಘ್ರ ಜಾರಿಗೆ ಹಾಗೂ ರಾಜ್ಯದಲ್ಲಿ ಮಹಾರಾಷ್ಟ್ರ ಏಕಿಕರಣ ಸಂಘಟನೆ(ಎಂ.ಇ.ಎಸ್.) ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಇಂದು ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದವು.
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು, ಮಹಾದಾಯಿ, ಮೇಕೆದಾಟುವಿಗಾಗಿ ಪಾದಯಾತ್ರೆ ಮಾಡುವ ಬದಲು ನಾಯಕರು ಕೂಡಲೇ ರಾಜೀನಾಮೆ ಕೊಡಿ ಎಂದು ಅಸಮಾಧಾನ ಹೊರಹಾಕಿದರು.
ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಹೊಗೇನಕಲ್ ಎರಡನೇ ಹಂತದ ಯೋಜನೆ ಜಾರಿ ಆಗ್ತಿದೆ. ಇದಕ್ಕೆ ಪ್ರಧಾನ ಮಂತ್ರಿಯವರ ಕುಮ್ಮಕ್ಕು ಇದೆ ಎಂದು ವಾಟಾಳ್ ಆರೋಪಿಸಿದರು. ಪ್ರಧಾನಿ ಮೇಲೆ ಒತ್ತಡ ತರಬೇಕು ಅಂದ್ರೆ ರಾಜೀನಾಮೆ ಬಹಳ ಪ್ರಾಮುಖ್ಯತೆ ಇದೆ. ರಾಜೀನಾಮೆ ಕೊಡುವ ಬಗ್ಗೆ ಎಲ್ಲಾ ಪಕ್ಷದವರು ಸೂಕ್ತ ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕ-ಹೈದರಾಬಾದ್ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು ಅಂದರು.
ಇದನ್ನೂ ಓದಿ:ನಂದಿತಾ ಪ್ರಕರಣದಲ್ಲಿ ಸಾಕ್ಷಿಗಳು ಸತ್ತು ಹೋದ ಮೇಲೆ ಸಿಬಿಐಗೆ ಕೊಟ್ಟರೆ ಏನು ಪ್ರಯೋಜನ : ಸಚಿವ ಆರಗ
ಎಂ.ಇ.ಎಸ್. ನಿಷೇಧಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಆದ್ರೆ ಯಾವ ಪಕ್ಷದವರು ಕೂಡ ಎಂಇಎಸ್ ನಿಷೇಧದದ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ರಾಜ್ಯದ ಸಿಎಂ ಒಳ್ಳೆಯವರು, ಈ ವಿಚಾರದ ಬಗ್ಗೆ ನಾವು ಸಿಎಂ ಬಳಿ ಚರ್ಚಿಸಿದ್ದೇವೆ. ಅದಕ್ಕೆ ಅವರು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ. ಆದ್ರೆ ಯಾವುದೇ ರಿಸಲ್ಟ್ ಕಾಣ್ತಿಲ್ಲ. ಎಂಇಎಸ್ ಬ್ಯಾನ್ ಮಾಡಿಲ್ಲ. ನಮ್ಮ ರಾಜ್ಯಕ್ಕೆ ಮಾರಕ ಆಗಿರೋ ಎಂಇಎಸ್ ನಿಷೇಧ ಆಗಲೇಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಸೇರಿದಂತೆ ಇತರರು ರಸ್ತೆ ತಡೆಗೆ ಮುಂದಾದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ