ಕರ್ನಾಟಕ

karnataka

ETV Bharat / city

ಸಚಿವ ಗೋಪಾಲಯ್ಯ ನಿವಾಸದ ಬಳಿ ಯುವಕನಿಗೆ ಕೊರೊನಾ‌ ಸೋಂಕು: ರಸ್ತೆ ಬಂದ್ ಮಾಡಿದ ಅಧಿಕಾರಿಗಳು - ಸಚಿವ ಗೋಪಾಲಯ್ಯ ನಿವಾಸದ ಬಳಿ ಕೊರೊನಾ‌ ಪಾಸಿಟಿವ್

ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿರುವ ಸಚಿವ ಗೋಪಾಲಯ್ಯ ನಿವಾಸದ ಬಳಿ ಯುವಕನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಯುವಕ ವಾಸವಿದ್ದ ರಸ್ತೆಯನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ‌. ರಸ್ತೆಗೆ ಅಧಿಕಾರಿಗಳು ಫ್ಲೋರೈಡ್ ದ್ರಾವಣ ಸಿಂಪಡಿಸಿದ್ದಾರೆ.

Bangalore
ಕಾಮಾಕ್ಷಿ ಪಾಳ್ಯ

By

Published : Jun 30, 2020, 5:05 PM IST

‌ಬೆಂಗಳೂರು:ಕೊರೊನಾ‌ ವೈರಸ್​ ನಗರದ ಎಲ್ಲ ವಾರ್ಡ್​ಗಳಲ್ಲಿ‌ ವ್ಯಾಪಿಸುತ್ತಿದೆ. ಇದೀಗ ಸಚಿವ ಗೋಪಾಲಯ್ಯ ಮನೆ ಬಳಿ ಯುವಕನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಾಮಾಕ್ಷಿ ಪಾಳ್ಯದಲ್ಲಿ 25 ವರ್ಷದ ಯುವಕನಿಗೆ ಸೋಂಕು ದೃಢವಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಸೋಂಕಿತನನ್ನು ಸದ್ಯ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಯುವಕ ವಾಸವಿದ್ದ ರಸ್ತೆಯನ್ನ ಸೀಲ್​ಡೌನ್ ಮಾಡಲಾಗಿದೆ‌. ಅಧಿಕಾರಿಗಳು ಫ್ಲೋರೈಡ್ ದ್ರಾವಣ ಸಿಂಪಡಿಸಿದ್ದಾರೆ.

ಶಿವನಗರ ವಾರ್ಡ್​ನಲ್ಲಿ ಕೊರೊನಾ‌ ಶಾಕ್...

ಶಿವನಗರ ವಾರ್ಡ್​ನಲ್ಲಿ ನಿತ್ಯ ಒಂದೊಂದು ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿವೆ. ಇಂದು ಕೂಡ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 30 ವರ್ಷದ ಮತ್ತು 34 ವರ್ಷದ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿದೆ. 29 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದುವರೆಗೆ‌ ಶಿವನಗರ‌ ವಾರ್ಡ್​ನಲ್ಲಿ 21 ಕೇಸ್​ಗಳು ವರದಿಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ. ಇತ್ತ ಅವರ ಸಂಪರ್ಕದಲ್ಲಿ ಅದೆಷ್ಟು ಮಂದಿ ಇದ್ದರು ಅನ್ನೋದೇ ಸದ್ಯ ಆರೋಗ್ಯಾಧಿಕಾರಿಗಳಿಗೆ‌ ತಲೆನೋವಾಗಿದೆ.

ಇಎಸ್ಐ ಆಸ್ಪತ್ರೆಯಲ್ಲಿ ಮತ್ತೊಂದು ಕೇಸ್...

ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಒಬ್ಬ ವೈದ್ಯರಿಗೆ ಕೊರೊನಾ‌ ಪಾಸಿಟಿವ್ ಬಂದಿದೆ. ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಕ್ವಾರಂಟೈನ್​ನಲ್ಲಿ ಇದ್ದರು. ಇದೀಗ ಅವರಿಗೆ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಈವರೆಗೆ 11 ಪಾಸಿಟಿವ್ ಕೇಸ್​ಗಳು ವರದಿಯಾಗಿವೆ.

ABOUT THE AUTHOR

...view details