ಬೆಂಗಳೂರು:ಶಿಕ್ಷಕರ ದಿನಾಚರಣೆ ಪ್ರಯುಕ್ತ ತಮ್ಮ ನೆಚ್ಚಿನ ಗುರುಗಳ ಮನೆಗೆ ಭೇಟಿ ಕೊಟ್ಟಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್, ತಮಗೆ ಅಕ್ಷರ ಕಲಿಸಿದ ಗುರುವಿಗೆ ಹೂ ಗುಚ್ಛ ನೀಡಿ ಶುಭ ಕೋರಿದ್ದಾರೆ.
ನೆಚ್ಚಿನ ಗುರುವಿನ ನಿವಾಸಕ್ಕೆ ತೆರಳಿ ಶುಭಕೋರಿದ ಪೊಲೀಸ್ ಕಮೀಷನರ್ - Bangalore City'
ಶಿಕ್ಷಕರ ದಿನಾಚರಣೆ ನಿಮಿತ್ತ ತಮ್ಮ ನೆಚ್ಚಿನ ಗುರುಗಳ ಮನೆಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್, ಅವರಿಗೆ ಶುಭ ಕೋರಿ ಗಮನ ಸೆಳೆದರು.
ನೆಚ್ಚಿನ ಗುರುವಿನ ನಿವಾಸಕ್ಕೆ ತೆರಳಿ ಶುಭಕೋರಿದ ಪೊಲೀಸ್ ಕಮೀಷನರ್
ಡಾ.ವೈ.ಎನ್.ರಮೇಶ್ ಅವರು ಭಾಸ್ಕರ್ ರಾವ್ ಅವರ ಗುರುಗಳು. 1983 - 86 ರವರೆಗೆ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಷಯ ಭೋದನೆ ಮಾಡುತ್ತಿದ್ದರು. ಈ ವೇಳೆ ಸಮಾಜಶಾಸ್ತ್ರ ವಿಷಯದ ಜೊತೆಗೆ ಜೀವನದ ಪಾಠವನ್ನು ಹೇಳಿಕೊಟ್ಟಿದ್ದಾರೆ. ಆದ್ದರಿಂದಲೇ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಕೆಲ ಹೊತ್ತು ತಾನು ಕಾಲೇಜಿನಲ್ಲಿ ಕಳೆದ ಕ್ಷಣಗಳ ಬಗ್ಗೆ ಮೆಲುಕು ಸಹ ಹಾಕಿದರು.