ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ಗಡಿ ದಾಟಿದೆ. ಪ್ರತಿ ಲೀಟರ್‌ಗೆ 100.25 ರೂಪಾಯಿ ಆಗಿದೆ. ನಿನ್ನೆಯಷ್ಟೆ 99 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ಇಂದು ಸೆಂಚುರಿ ಬಾರಿಸಿದೆ.
ಇನ್ನು ಇದೇ ಹಾದಿಯಲ್ಲಿ ಡೀಸೆಲ್ ಬೆಲೆ ಇದ್ದು, ಪ್ರತಿ ಲೀಟರ್‌ಗೆ 93.05 ರೂಪಾಯಿಗಳಾಗಷ್ಟಾಗಿದೆ. ಈಗಾಗಲೇ ಕೊರೊನಾ ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದೆ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದ್ದು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ.