ಬೆಂಗಳೂರು:ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಉತ್ತರಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಉತ್ತರಕರ್ನಾಟಕ ಉದ್ಯಮಿಗಳ ಸಂಪರ್ಕ ಸಹಭಾಗಿತ್ವ ಹಾಗೂ ಸಮನ್ವಯತೆ ಸಾಧಿಸುವುದಕ್ಕೆ ವರ್ಕ್ ಶಾಪ್ ಆಯೋಜಿಸಲಾಗಿದೆ.
ಉತ್ತರಕರ್ನಾಟಕ ಉದ್ಯಮಿಗಳ ಸಂಪರ್ಕ ಸಹಭಾಗಿತ್ವ ಹಾಗೂ ಸಮನ್ವಯತೆ ಸಾಧಿಸಲು ಕಾರ್ಯಾಗಾರ
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಉತ್ತರಕರ್ನಾಟಕ ಸ್ನೇಹ ಲೋಕಾ ಟ್ರಸ್ಟ್ ವತಿಯಿಂದ ಉತ್ತರಕರ್ನಾಟಕ ಉದ್ಯಮಿಗಳ ಸಂಪರ್ಕ ಸಹಭಾಗಿತ್ವ ಹಾಗೂ ಸಮನ್ವಯ ಸಾಧಿಸುವುದಕ್ಕೆ ವರ್ಕ್ ಶಾಪ್ ಆಯೋಜನೆ ಮಾಡಲಾಗಿದೆ.
ಉತ್ತರ ಕರ್ನಾಟಕದ ಉದ್ಯಮಿಗಳನ್ನು ಒಂದು ವೇದಿಕೆಯಲ್ಲಿ ತಂದು ಸಂಪರ್ಕಿಸಿ, ಎಲ್ಲಾ ಉದ್ಯಮಗಳನ್ನ ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸುಮಾರು 145 ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಮೋಟಿವೇಷನ್ ಸ್ಪಿಕಿಂಗ್ನ್ನು ನುರಿತ ತಜ್ಞರಿಂದ ಆಯೋಜಿಸಲಾಗಿದೆ. ನಂತರ ಎಲ್ಲಾ ಉತ್ತರಕರ್ನಾಟಕ ಉದ್ಯಮಿಗಳ ಪರಸ್ಪರ ಭೇಟಿ ಕಾರ್ಯಕ್ರಮದಲ್ಲಿ ನಿಗದಿ ಮಾಡಲಾಗಿದ್ದು, ಇದರಲ್ಲಿ 125ಜನ ಉದ್ಯಮಿಗಳು ಬಾಗವಹಿಸಿದ್ದಾರೆ ಎಂದು ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಅಧ್ಯಕ್ಷ ಗಂಗಾಧರ್ ವಾಲೆ ತಿಳಿಸಿದರು.
ಕೇವಲ ಉದ್ಯಮಿಗಳಷ್ಟೇ ಅಲ್ಲದೆ, ಉದ್ಯಮ ಪ್ರಾರಂಭಿಸುವ ಕನಸಿರುವವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅವರಿಗೆ ಉದ್ಯಮದ ಬಗ್ಗೆ ಜ್ಞಾನ ವೃದ್ಧಿಸುತ್ತದೆ ಎಂದು ಗಂಗಾಧರ್ ಅಭಿಪ್ರಾಯಪಟ್ಟರು.