ಬೆಂಗಳೂರು:ಕೋವಿಡ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಗುಮಾಸ್ತರಿಗೆ ಅಗತ್ಯ ನೆರವು ನೀಡಲು ತಕ್ಷಣವೇ 'ಕರ್ನಾಟಕ ರಿಜಿಸ್ಟರ್ಡ್ ಕ್ಲರ್ಕ್ಸ್ ವೆಲ್ ಫೇರ್ ಫಂಡ್ ' ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ವಕೀಲರ ಗುಮಾಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲ ಮೂರ್ತಿ ಡಿ.ನಾಯಕ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಗುಮಾಸ್ತರ ನೆರವಿಗೆ 10 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ. ಆದರೆ, ಈ ಹಣವನ್ನು ನಿರ್ವಹಣೆ ಮಾಡುವ ಸಮಿತಿ ನಿಷ್ಕ್ರಿಯವಾಗಿದೆ ಎಂದರು.