ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ತಂದೆಯ ತಿಥಿ ದಿನವೇ ಮಗಳ ದುರಂತ ಅಂತ್ಯ: ಮೃತನ ಪತ್ನಿ, ಮಗ ಸೇರಿ ಐವರ ಸ್ಥಿತಿ ಗಂಭೀರ - One died in Cylinder explosion at Bangalore

ತಂದೆಯ 6ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಎಡೆ ಇಡಲು‌ ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಸಂಭವಿಸಿದ ಅನಾಹುತದಲ್ಲಿ ಮಗಳು ಸಾವನ್ನಪ್ಪಿದರೆ, ಐವರು ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಲಿಂಡರ್ ಸ್ಫೋಟ
ಸಿಲಿಂಡರ್ ಸ್ಫೋಟ

By

Published : Feb 17, 2022, 2:03 PM IST

ಬೆಂಗಳೂರು: ತಂದೆಯ ತಿಥಿ ಕಾರ್ಯದ ದಿನವೇ ಮಗಳು ದುರಂತ ಅಂತ್ಯ ಕಂಡ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ತಂದೆಯ 6ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಎಡೆ ಇಡಲು‌ ಅಡುಗೆ ಮಾಡುವಾಗ ಗ್ಯಾಸ್ ಸ್ಫೋಟಗೊಂಡ ಪರಿಣಾಮ ಮೃತರ ಮಗಳು ಸಾವನ್ನಪ್ಪಿದರೆ, ಹೆಂಡತಿ, ಮಗ ಸೇರಿ ಐವರು ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಶಿನಾಥ್ ಎಂಬುವರು ಕಳೆದ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ನಿನ್ನೆ 6 ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ‌ ಸಂಬಂಧಿಕರು ಸೇರಿ ತಿಥಿ ಕಾರ್ಯಕ್ಕಾಗಿ ಅಡುಗೆ ಮಾಡುವಾಗ ಅನಿಲ ಸೋರಿಕೆಯಾಗಿದ್ದು, ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

ಸ್ಫೋಟದ ರಭಸಕ್ಕೆ ಪುತ್ರಿ ಪರಮೇಶ್ವರಿ ಗಂಭೀರ ಗಾಯಗೊಂಡು ಸಾವನ್ನಪ್ಪಿದರೆ, ಕಾಶಿನಾಥ್​ರ ಪತ್ನಿ ಸೌಭಾಗ್ಯ, ಮಗ ಶರವಣ, ಸಂಬಂಧಿಕರಾದ ಪರಮಶಿವಂ, ಭುವನೇಶ್ವರಿ, ಮಾಲಾ ಎಂಬುವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details