ಬೆಂಗಳೂರು: ವರ್ಗಾವಣೆಗೊಂಡರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ 38 ಇನ್ಸ್ಪೆಕ್ಟರ್ಗಳಿಗೆ ಡಿಜಿ-ಐಜಿಪಿ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಏಳು ದಿನಗಳೊಳಗೆ ಉತ್ತರ ನೀಡುವಂತೆ ಖಡಕ್ ಎಚ್ಚರಿಕೆ ಕೊಡಲಾಗಿದೆ.
ಇದನ್ನೂ ಓದಿ:ವಿಡಿಯೋ ನೋಡಿ: ಪೊಲೀಸ್ ತಂಡದ ಮೇಲೆ ಚಿರತೆ ಅಟ್ಯಾಕ್; ರಕ್ಷಕರ ಧೈರ್ಯ ಮೆಚ್ಚಲೇಬೇಕು!
ನೋಟಿಸ್ನಲ್ಲೇನಿದೆ?: ಸಂಬಂಧಿಸಿದ ಘಟಕಾಧಿಕಾರಿಗಳು ನಿಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಆದ್ರೂ ಸಹ ನೀವು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇದುವರೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಈ ಮೂಲಕ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿದ್ದೀರಿ. ಹೀಗಾಗಿ ಕೂಡಲೇ ನೀವು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಂತಿಮವಾಗಿ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಪೊಲೀಸ್ ಸಿಬ್ಬಂದಿಗೆ ಚಿಕ್ಕಮಗಳೂರು ಎಸ್ಪಿ 'ಫಿಟ್‌ನೆಸ್ ಟಾಸ್ಕ್'.. ದೇಹ ಹುರಿಗಟ್ಟಿದರೆ 'ರಿವಾರ್ಡ್ ಆಫರ್'!
ಒಂದು ವೇಳೆ ನೀವು ಕರ್ತವ್ಯಕ್ಕೆ ವರದಿ ಮಾಡಕೊಳ್ಳದೇ ಇಲ್ಲವಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮಿಂದಾದ ತಪ್ಪಿನ ಬಗ್ಗೆ ವಿವರಣೆ ಸಲ್ಲಿಸಲು ಈ ಅವಕಾಶ ನೀಡಲಾಗಿದೆ. ಸೂಚನಾ ಪತ್ರ ತಲುಪಿದ 7 ದಿನದೊಳಗಾಗಿ ಸಮಜಾಯಿಷಿ ಸಲ್ಲಿಸತಕ್ಕದ್ದು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ.