ಕರ್ನಾಟಕ

karnataka

ETV Bharat / city

ಹಂಪಿಯಲ್ಲಿ ಭೂಕಂಪನ ಸಂಭವಿಸಿಲ್ಲ: ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಸ್ಪಷ್ಟನೆ - ಹಂಪಿಯಲ್ಲಿ ಭೂಕಂಪನ

ಹಂಪಿಯಲ್ಲಿ ಲಘು ಭೂಕಂಪನ ಸಂಭವಿಸಿಲ್ಲ, ಜನರು ಭಯಪಡುವ ಅವಶ್ಯಕತೆಯಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

No Earthquake event recorded in Hampi
ಕೆಎಸ್‌ಎನ್‌ಡಿಎಂಸಿ

By

Published : Jun 5, 2020, 10:28 AM IST

ಬೆಂಗಳೂರು: ವಿಶ್ವ ವಿಖ್ಯಾತ ಐತಿಹಾಸಿಕ ತಾಣ ಹಂಪಿಯಲ್ಲಿ ಲಘು ಭೂಕಂಪನ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಸ್ಪಷ್ಟಪಡಿಸಿದೆ.

ಹಂಪಿಯ ಪೂರ್ವ ಭಾಗದಿಂದ 181 ಕಿ.ಮೀ ದೂರದಲ್ಲಿನ ಒಂದು ಪ್ರದೇಶದಲ್ಲಿ ರಿಕ್ಟರ್​ ಮಾಪನದಲ್ಲಿ 4.0 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಅದರ ಪ್ರಭಾವ ಹಂಪಿಯಲ್ಲಿ ದಾಖಲಾಗಿದೆಯಷ್ಟೆ. ಇದನ್ನು ಸ್ವಯಂ ಪ್ರಚೋದಿತ ಘಟನೆಗಳು (auto triggered events) ಎಂದು ಕರೆಯುತ್ತಾರೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿ ಜಗದೀಶ್​ ತಿಳಿಸಿದ್ದಾರೆ.

ಕೆಎಸ್‌ಎನ್‌ಡಿಎಂಸಿ ಮಾಹಿತಿ

ಕೆಎಸ್‌ಎನ್‌ಡಿಎಂಸಿ ಮಾನಿಟರಿಂಗ್ ಸ್ಟೇಷನ್‌ ವ್ಯಾಪ್ತಿಯಲ್ಲಿ, ಅಂದರೆ ರಾಜ್ಯದಲ್ಲಿ ಯಾವುದೇ ರೀತಿಯ ಭೂಕಂಪನ ನಡೆದಿಲ್ಲ. ಜನರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಜಗದೀಶ್ ಹೇಳಿದ್ದಾರೆ.

ABOUT THE AUTHOR

...view details