ಬೆಂಗಳೂರು:ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಎಣ್ಣೆ ಅಂಗಡಿ ಬಳಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇನ್ನೂ ಕೆಲವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದೂ ಕೂಡಾ ಕಂಡುಬಂದಿದೆ. ಆದರೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಒಂದು ವೇಳೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಗೆ ಇಳಿದರೆ ಕೊರೊನಾ ಕಾಡುವ ಭೀತಿ ಅವರಲ್ಲಿದೆ.
ಸದ್ಯ ಕೊರೊನಾ ಮಹಾಮಾರಿ ಸಿಲಿಕಾನ್ ಸಿಟಿಯಲ್ಲಿ ಕೂಡ ರೌದ್ರ ನರ್ತನ ತೋರತ್ತಿದೆ. ಕುಡಿದು ವಾಹನ ಚಾಲನೆ ಮಾಡುವಾಗ ವಾಹನ ಸವಾರ ಕುಡಿದಿದ್ದನಾ? ಇಲ್ಲವಾ? ಎಂಬುದನ್ನು ಪತ್ತೆ ಹಚ್ಚಲು ಅವನಿಗೆ ಆಲ್ಕೋಮೀಟರ್ ನೀಡಿ ಊದಿಸಬೇಕಾಗುತ್ತದೆ. ಈ ವೇಳೆ ವಾಹನ ಸವಾರ ಕೊರೊನಾ ಸೋಂಕಿತ ವ್ಯಕ್ತಿಯಾಗಿದ್ದರೆ, ಆ ಸೋಂಕು ಪೊಲೀಸರಿಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಲ್ಕೋಮೀಟರ್ ಮೂಲಕ ತಪಾಸಣೆಗೆ ನಡೆಸುವುದಿಲ್ಲ.