ಕರ್ನಾಟಕ

karnataka

ETV Bharat / city

ನಾಳೆಯಿಂದ 2 ದಿನ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನ - ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನ

ಯಶವಂತಪುರದ ಖಾಸಗಿ ಹೋಟೆಲ್‌ನಲ್ಲಿ ಜು.14 ಮತ್ತು 15ರಂದು ವಿವಿಧ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Jul 13, 2022, 2:08 PM IST

ಬೆಂಗಳೂರು: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಜು.14 ಮತ್ತು 15ರಂದು ಬೆಂಗಳೂರಿನಲ್ಲಿ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ಮರಣಾರ್ಥ ಬೆಂಗಳೂರಿನ ಯಶವಂತಪುರದ ಖಾಸಗಿ ಹೋಟೆಲ್​​ನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಸಮ್ಮೇಳನ ನಡೆಯಲಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮುಂದಿನ ಹಂತದ ಕ್ರಾಂತಿಯನ್ನು ಮಾಡಲು ಈ 'ಇ-ನಾಮ್' ಅಡಿಯಲ್ಲಿ ಪ್ಲಾಟ್‌ಫಾರ್ಮ್ ಆಫ್ ಪ್ಲಾಟ್‌ ಫಾರ್ಮ್‌ಗಳ (ಪಿಒಪಿ) ಮೂಲಕ ಎಲ್ಲಾ ಪಾಲುದಾರರ ಭಾಗವಹಿಸುವಿಕೆಗಾಗಿ ಭಾರತ ಸರ್ಕಾರ ಒಂದು ವಿನೂತನ ಉಪಕ್ರಮ ಕೈಗೊಂಡಿದೆ. ಇದು ಭಾರತದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ರಾಜ್ಯದಿಂದ ಹೊರಗೆ ಮಾರಾಟ ಮಾಡಲು ಅನುಕೂಲವಾಗುತ್ತದೆ.

ಬಹು ಸಂಖ್ಯೆಯ ಮಾರುಕಟ್ಟೆಗಳು, ಖರೀದಿದಾರರು, ಸೇವಾ ಪೂರೈಕೆದಾರರಿಗೆ ಡಿಜಿಟಲ್ ಮೂಲಕ ರೈತರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರೈತರಿಗೆ ಕೃಷಿ ಉತ್ಪನ್ನಗಳ ಉತ್ತಮ ಬೆಲೆ ಮತ್ತು ಬೆಲೆ ಅನ್ವೇಷಣೆ ಕಾರ್ಯವಿಧಾನವನ್ನು ಸುಧಾರಿಸುವ ಉದ್ದೇಶದಿಂದ ವ್ಯಾಪಾರ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ತರುತ್ತದೆ.

ಇ-ನಾಮ್ ಒಂದು ಪಿಒಪಿ ವೇದಿಕೆಯಾಗಿ ಸಮರ್ಥ ಮತ್ತು ಪರಿಣಾಮಕಾರಿ 'ಒಂದು ರಾಷ್ಟ್ರ ಒಂದು ಮಾರುಕಟ್ಟೆ' ಪರಿಸರ ವ್ಯವಸ್ಥೆಯನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಸಮ್ಮೇಳನದಲ್ಲಿ ತಾಂತ್ರಿಕ ಅಧಿವೇಶನವನ್ನು 9 ವಿಷಯಾಧಾರಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ.

ಅಂದರೆ, ಡಿಜಿಟಲ್ ಕೃಷಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ನೈಸರ್ಗಿಕ ಕೃಷಿ, ಎಫ್‌ಪಿಒ, ಇ-ನಾಮ್‌, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಕೃಷಿ ಮೂಲಸೌಕರ್ಯ ನಿಧಿ, ಐಸಿಎಆರ್‌ನಿಂದ ಹೊಸ ತಂತ್ರಜ್ಞಾನ, ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ಕೃಷಿ ಮತ್ತು ಸಂಬಂಧಿತ ವಲಯದಲ್ಲಿನ ಉತ್ತಮ ಅಭ್ಯಾಸಗಳ ಕುರಿತು ಪ್ರತ್ಯೇಕ ಅಧಿವೇಶನವನ್ನು ಸಮ್ಮೇಳನದ ಸಮಯದಲ್ಲಿ ತಾಂತ್ರಿಕ ಅಧಿವೇಶನದೊಂದಿಗೆ ಸಂಯೋಜಿಸಲಾಗುತ್ತದೆ.

ರೈತರಿಗೆ ಕೃಷಿ ಉತ್ಪನ್ನಗಳ ಉತ್ತಮ ಬೆಲೆಗಳನ್ನು ಪಡೆಯಲು ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಇ-ನ್ಯಾಮ್ ಪ್ಲಾಟ್‌ಫಾರ್ಮ್ ವೇದಿಕೆಯನ್ನು ಪ್ರಾರಂಭಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಸ್ವಾವಲಂಬಿ ಭಾರತ ನಿರ್ಮಾಣದತ್ತ ದಾಪುಗಾಲು ಇಟ್ಟಿರುವ 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ದ ನೆನಪಿಗಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೃಷಿ ಮತ್ತು ತೋಟಗಾರಿಕೆ ಸಚಿವ ಕೈಲಾಶ್ ಚೌಧರಿ, ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ABOUT THE AUTHOR

...view details