ಕರ್ನಾಟಕ

karnataka

ETV Bharat / city

ಕೊಂಚ ಯಾಮಾರಿದ್ರೂ ನಿಮ್ಮ ಹಣ ಮಾಯ... ಹೇಗೆ ಅಂತಾ ನೋಡಿ!

ಬೈಕ್​ನಲ್ಲಿ ಅಪರಿಚಿತನೊಬ್ಬ ಹೆಲ್ಮೆಟ್ ಧರಿಸಿ ಬಂದು ಬೈಕಿನಲ್ಲಿದ್ದ 1 ಲಕ್ಷ ರೂ. ಎಗರಿಸಿ ಮತ್ತೊಬ್ಬ ಆರೋಪಿಯ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದಾನೆ.

ಹಣ

By

Published : Feb 9, 2019, 11:52 AM IST

ಬೆಂಗಳೂರು:ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಬೈಕ್ ನಿಲ್ಲಿಸಿ ಹೋದಾಗ ಕ್ಷಣಾರ್ಧದಲ್ಲಿ ಬಂದ ಇಬ್ಬರು ಅಪರಿಚಿತರು ಒಂದು ಲಕ್ಷ ರೂ. ಕಬಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಪಿಳ್ಳಪ್ಪ ಎಂಬುವರು ಬೇಗೂರಿನ ಕೆನರಾ ಬ್ಯಾಂಕ್ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದಾಗ ಪಕ್ಕದಲ್ಲೇ ಇದ್ದ ಬಾರ್ ಬಳಿ ತಮ್ಮ ಬೈಕ್ ನಿಲ್ಲಿಸಿ ಒಳ ಹೋಗಿದ್ದಾರೆ. ಈ ವೇಳೆ ಬೈಕ್​ನಲ್ಲಿ ಅಪರಿಚಿತನೊಬ್ಬ ಹೆಲ್ಮೆಟ್ ಧರಿಸಿ ಬಂದು ಬೈಕಿನಲ್ಲಿದ್ದ 1 ಲಕ್ಷ ರೂ. ಎಗರಿಸಿ ಮತ್ತೊಬ್ಬ ಆರೋಪಿಯ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದಾನೆ.

ಬಾರ್ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಬೇಗೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details