ಹೊಸಕೋಟೆ: ಕೊರೊನಾ ವೈರಸ್ ಇದುವರೆಗೂ ಹೊಸಕೋಟೆಯಲ್ಲಿ ಪತ್ತೆಯಾಗಿಲ್ಲ. ಇದೇ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿ ಎಂದು ಶಾಸಕ ಶರತ್ ಬಚ್ಚೇಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.
'ನಿಗದಿತ ಸಮಯದೊಳಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಿ; ಸಾಮಾಜಿಕ ಅಂತರ ಪಾಲಿಸಿ'
ಜನರು ನೆಲದಲ್ಲಿ ಮಾರ್ಕ್ ಹಾಕಿರುವ ಚೌಕಗಳ ನಡುವೆ ನಿಂತು, ನೂಕುನುಗ್ಗಲು ಮಾಡದೆ ವಸ್ತುಗಳನ್ನು ಕೊಂಡುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ತಡೆಗಟ್ಟಲು ಮುಂದಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು.
ಕೊರೊನಾ ಕುರಿತು ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ
ಅವಶ್ಯಕ ವಸ್ತುಗಳಾದ ನೀರು, ದಿನಸಿ, ಹಾಲು, ತರಕಾರಿ, ಹಣ್ಣುಗಳು ಮತ್ತು ಔಷಧಿಗಳನ್ನು ಖರೀದಿಸಲು ಬೆಳಿಗ್ಗೆ 9.00 ರಿಂದ ರಾತ್ರಿ 9.00 ಗಂಟೆಯವರೆಗೆ ಅಂಗಡಿಗಳು ತೆರೆದಿರುತ್ತವೆ. ಜನರು ನೆಲದಲ್ಲಿ ಮಾರ್ಕ್ ಹಾಕಿರುವ ಚೌಕಗಳ ನಡುವೆ ಬಂದು ನೂಕುನುಗ್ಗಲು ಮಾಡದೆ ವಸ್ತುಗಳನ್ನು ಕೊಂಡುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ತಡೆಗಟ್ಟಲು ಮುಂದಾಗಬೇಕು ಎಂದು ತಿಳಿಸಿದರು.