ಬೆಂಗಳೂರು: ವಿಧಾನ ಪರಿಷತ್ನ ಸೋಮವಾರ ಕಲಾಪ ಮುಕ್ತಾಯ ಸಂದರ್ಭ ಕಾಂಗ್ರೆಸ್ ಪಕ್ಷದ ಸಚೇತಕ ಎಂ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಡಾ.ಕೆ.ಶಿವರಾಮ್ ಕಾರಂತ್ ಬಡಾವಣೆ ಭೂ ಸ್ವಾಧೀನಕ್ಕೆ ರೈತರ ಆಕ್ಷೇಪ ವಿಚಾರವಾಗಿ ನಿಯಮ 330ರ ಮೇರೆಗೆ ವಿಷಯ ಪ್ರಸ್ತಾಪಿಸಿದ ಎಂ.ನಾರಾಯಣಸ್ವಾಮಿ ಉತ್ತರ ನೀಡಲು ಸಿಎಂ, ಸಭಾನಾಯಕ ಇಲ್ಲದರಿಂದ ಗರಂ ಆದರು.
ತಾವು ಕಳೆದ ವಾರವೇ ಈ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದೆ. ಮುಂದಿನ ವಾರ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು, ಸಿಎಂ ಇದಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ ಗದ್ದಲ ಮಾಡುವುದಾಗಿ ಎಚ್ಚರಿಸಿದ್ದರು.
ಶುಕ್ರವಾರ ಮಧ್ಯಾಹ್ನ ಕಲಾಪ ಮುಕ್ತಾಯವಾಗುವ ಸಂದರ್ಭ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವಕಾಶ ನೀಡುವ ಭರವಸೆ ನೀಡಿದ್ದರು. ಆದರೆ ಇಂದು ಕಡೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡಿದಾಗ ಉತ್ತರ ನೀಡಲು ಸಿಎಂ ಇಲ್ಲವೇ ಸಭಾನಾಯಕರು ಇಲ್ಲದಿರುವುದಕ್ಕೆ ನಾರಾಯಣಸ್ವಾಮಿ ಗರಂ ಆದರು.