ಕರ್ನಾಟಕ

karnataka

ETV Bharat / city

ಸಚಿವ ಮುರುಗೇಶ್ ನಿರಾಣಿ Twitter ಖಾತೆ ಹ್ಯಾಕ್: ಶೀಘ್ರವೇ ದೂರು

ಈ ಹಿಂದೆ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಫೇಸ್​ಬುಕ್‌ ಖಾತೆ ಹ್ಯಾಕ್ ಮಾಡಿದ್ದ ಸೈಬರ್ ಖದೀಮರು ಹಣಕ್ಕೆ‌ ಡಿಮ್ಯಾಂಡ್ ಮಾಡಿದ್ದರು. ಇದೀಗ ಅವರ ಟ್ವಿಟ್ಟರ್ ಖಾತೆಯನ್ನೂ ಹ್ಯಾಕ್ ಮಾಡಲಾಗಿದೆ.

ಸಚಿವ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿ

By

Published : Sep 21, 2021, 2:07 PM IST

ಬೆಂಗಳೂರು:ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ ಮುರುಗೇಶ್ ಆರ್ ನಿರಾಣಿ ಅವರ ಟ್ವಿಟ್ಟರ್ ಖಾತೆ @NiraniMurugesh ಹ್ಯಾಕ್ ಆಗಿದ್ದು, ಶೀಘ್ರವೇ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

ನನ್ನ ಟ್ವಿಟರ್ ಖಾತೆಯನ್ನ ಇಂದು ಅಜ್ಞಾತ ವಿದೇಶಿ ಸ್ಥಳದಿಂದ ಹ್ಯಾಕ್ ಮಾಡಲಾಗಿದೆ. ಆರೋಪಿಗಳ ನಿಖರವಾದ ಮೂಲ ಮತ್ತು ಗುರುತು ನಮಗೆ ತಿಳಿದಿಲ್ಲ. ಈ ಹಿಂದೆಯು ಇದೇ ರೀತಿ ಕೆಲವು ದುಷ್ಕರ್ಮಿಗಳು ನನ್ನ ಫೇಸ್​ಬುಕ್ ಹ್ಯಾಕ್ ಮಾಡಿದ್ದರು ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್​

ಇದನ್ನೂ ಓದಿ: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ FACEBOOK ಖಾತೆ ಹ್ಯಾಕ್ : ಹಣಕ್ಕಾಗಿ ಡಿಮ್ಯಾಂಡ್

ಹ್ಯಾಕರ್‌ಗಳು ಪೋಸ್ಟ್ ಮಾಡುವ ಯಾವುದೇ ಮೋಸದ ಸಂದೇಶಗಳಿಗೆ ಬಲಿಯಾಗಬೇಡಿ. ನನ್ನ ಖಾತೆಯಲ್ಲಿರುವ ಯಾವುದೇ ಅವಹೇಳನಕಾರಿ ಮತ್ತು ಅಸಂಸದೀಯ ಸಂದೇಶಗಳನ್ನು ನಿರ್ಲಕ್ಷಿಸಿ.

ಯಾರೊಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೆಂದು ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ. ಈಗಾಗಲೇ ನಾವು ಟ್ವಿಟರ್‌ಗೆ ದೂರು ನೀಡಿದ್ದು, ಶೀಘ್ರದಲ್ಲೇ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುವೆ ಎಂದು ನಿರಾಣಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ನಿರಾಣಿ ಫೇಸ್​ಬುಕ್‌ ಖಾತೆ ಹ್ಯಾಕ್ ಮಾಡಿದ್ದ ಸೈಬರ್ ಖದೀಮರು ಹಣಕ್ಕೆ‌ ಡಿಮ್ಯಾಂಡ್ ಮಾಡಿರುವುದು ಬೆಳಕಿಗೆ ಬಂದಿತ್ತು

ABOUT THE AUTHOR

...view details