ಬೆಂಗಳೂರು :ನಡೆಯುವವನ ಮೇಲೆ ಕಲ್ಲು ಹೊಡೆಯುವುದು. ಮಲಗಿದವನ ಮೇಲೆ ಅಲ್ಲ. ಹಾಗಾಗಿ, ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಹಾಗಾಗಿ, ಕಲ್ಲು ಹೊಡೆಯುವ ಪ್ರಯತ್ನ ನಡೆದಿದೆ ಎಂದರು.
ಬೆಳಗಾವಿಯ ಕಂಟ್ರಾಕ್ಟರ್‌ನಿಂದ ನಾಲ್ಕು ಕೋಟಿ ರೂ. ಹಣ ಕೇಳುತ್ತಿರುವ ಆರೋಪಕ್ಕೆ ಹುರುಳಿಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಯಾವುದೇ ಕಾಮಗಾರಿ ಮಾಡಿಲ್ಲ. ಯಾವುದೇ ಕಾಮಗಾರಿಗೂ ಅನುಮೋದನೆ ಪಡೆದಿಲ್ಲ. ಅಡ್ಮಿನಿಸ್ಟ್ರೇಷನ್ ಅಪ್ರೂವ್ ಆಗಿಲ್ಲ. ವರ್ಕ್ ಆರ್ಡರ್ ಕೂಡ ಆಗಿಲ್ಲ. ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದರು.
ಹಣ ಬಿಡುಗಡೆಗೆ ಹಣ ಕೇಳದ್ದೇನೆ ಅಂತಾ ಆರೋಪ ಮಾಡಿದ್ದಾರೆ. ಬೆಳಗಾವಿ ಸಂತೋಷ್ ಪಾಟೀಲ್ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ಇದಕ್ಕೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ನಾಲ್ಕು ಕೋಟಿ ಆರೋಪ ಹೇಗೆ ಬಂತು ಗೊತ್ತಾಗಿಲ್ಲ. ಕೇವಲ ನನ್ನ ಬಗ್ಗೆ ಆರೋಪಕ್ಕೆ ಉತ್ತರ ಕೊಡುತ್ತೇನೆ.
ಕಾಂಗ್ರೆಸ್ ಇಷ್ಟು ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ವರ್ಕ್ ಆರ್ಡರ್ ಇಲ್ಲದೇ ಆರೋಪ ಮಾಡುತ್ತಿದ್ದಾರೆ. ಕಾರ್ಯಾದೇಶ ಇಲ್ಲದೆ ಕೆಲಸ ಹೇಗೆ ಆಗುತ್ತದೆ?. ಕಾಂಗ್ರೆಸ್ಗೆ ಅಷ್ಟೂ ಗೊತ್ತಾಗಲ್ವಾ?. ಸಂತೋಷ್ ನಮ್ಮ ಪಕ್ಷದ ಕಾರ್ಯಕರ್ತರ ಅಲ್ಲ. ನನ್ನ ಮೇಲೆ ಷಡ್ಯಂತ್ರ ನಡೆದಿದೆ. ನಾನು ಇದರ ಬಗ್ಗೆ ದೂರು ನೀಡಿದ್ದೇನೆ ಎಂದು ಸಚಿವ ಈಶ್ವರಪ್ಪ ವಿವರಿಸಿರು.
ಇದನ್ನೂ ಓದಿ:ಜಿ.ಪಂ, ತಾ.ಪಂ. ಚುನಾವಣೆ : ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲು ಬಿಡಲ್ಲವೆಂದ ಸಚಿವ ಈಶ್ವರಪ್ಪ