ಕರ್ನಾಟಕ

karnataka

ETV Bharat / city

ಎಂಎಲ್ಸಿ ಆಯ್ಕೆ ವಿಚಾರದಲ್ಲಿ ಸ್ಥಾನ ವಂಚಿತರ ಅಸಮಾಧಾನ ಮುಂದುವರಿಕೆ ; ಡಿಕೆಶಿಗೆ ಲಕ್ಷ್ಮಿನಾರಾಯಣ ಪತ್ರ - ಕಾಂಗ್ರೆಸ್ ನಾಯಕ ಎಂ ಡಿ ಲಕ್ಷ್ಮೀನಾರಾಯಣ ಪತ್ರ

ಎಂ ಡಿ ಲಕ್ಷ್ಮಿನಾರಾಯಣ ಅವರು ಡಿ ಕೆ ಶಿವಕುಮಾರ್​ ಅವರಿಗೆ ಬರೆದಿರುವ ಪತ್ರದಲ್ಲಿ ಚಿಂಥನ ಮಂಥನದಲ್ಲಿ ಮುಕ್ತ ಚರ್ಚೆಗೆ ಮೊದಲ ಆದ್ಯತೆ ಕೊಡಬೇಕು ಎನ್ನುವ ಬೇಡಿಕೆಯಿಟ್ಟಿದ್ದು, 6 ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ..

M.D.Lakshminarayana and D.K.Shivakumar
ಎಂ.ಡಿ.ಲಕ್ಷ್ಮೀನಾರಾಯಣ ಹಾಗೂ ಡಿ.ಕೆ.ಶಿವಕುಮಾರ್​

By

Published : May 28, 2022, 6:14 PM IST

ಬೆಂಗಳೂರು :ವಿಧಾನಪರಿಷತ್ ಸ್ಥಾನ ವಂಚಿತ ಕಾಂಗ್ರೆಸ್ ನಾಯಕರ ಆಕ್ರೋಶ ಮುಂದುವರೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಕಾಂಗ್ರೆಸ್ ನಾಯಕ ಎಂ ಡಿ ಲಕ್ಷ್ಮಿನಾರಾಯಣ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಪತ್ರದಲ್ಲಿ ಲಕ್ಷ್ಮಿನಾರಾಯಣ, ಚಿಂಥನ ಮಂಥನದಲ್ಲಿ ಮುಕ್ತ ಚರ್ಚೆಗೆ ಮೊದಲ ಆದ್ಯತೆ ಕೊಡಿ. ನಮ್ಮೊಂದಿಗೆ ಚಿಂತನ ಮಂಥನ ಸಭೆಯಲ್ಲಿ 6 ಪ್ರಶ್ನೆಗಳ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಕೋರಿದ್ದಾರೆ.

ಎಂ ಡಿ ಲಕ್ಷ್ಮಿನಾರಾಯಣ ಕೇಳಿರುವ ಪ್ರಶ್ನೆಗಳು ಈ ಕೆಳಗಿನಂತಿವೆ..

1. ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ..?
2. ಇದ್ದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಎಷ್ಟು ಸಭೆಗಳನ್ನು ನಡೆಸಲಾಯಿತು. ಯಾವ ಮಾನದಂಡವನ್ನು ಅನುಸರಿಸಿ ಆಯ್ಕೆ ಮಾಡಲಾಗಿದೆ.
3. ಅಪೇಕ್ಷೀತರ ಪಟ್ಟಿಯಲ್ಲಿ ಎಷ್ಟು ಜನರ ಹೆಸರನ್ನು ಎಐಸಿಸಿಗೆ ಶಿಫಾರಸು ಮಾಡಲಾಯಿತು.
4. ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಶಿಫಾರಸು ಮಾಡಿ ನೀಡಿದ ಪಟ್ಟಿಯಲ್ಲಿರುವ ಹೆಸರುಗಳನ್ನು ತಿರಸ್ಕಾರ ಮಾಡಲು ಕಾರಣವೇನು..? ತೀರ್ಮಾನಿಸಿ ಪಟ್ಟಿಯನ್ನು ತಿರಸ್ಕಾರ ಮಾಡಿದ್ದು ಸರಿಯೇ?
5. ತಿರಸ್ಕಾರ ಮಾಡಿದ ನಂತರ ಯಾವ ಹೆಸರುಗಳನ್ನು ನೀಡಲಾಯಿತು..?
6.ಕೊನೆಗಳಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ನೀಡಿದ ಹೆಸರುಗಳನ್ನು ಕೈಬಿಟ್ಟು ಬೇರೆಯವರು ಸೂಚಿಸಿದ ಹೆಸರುಗಳನ್ನು ಎಐಸಿಸಿ ಅನುಮೋದನೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷದ ನಾಯಕರ ಗೌರವಕ್ಕೆ ಚ್ಯುತಿ ಬಂದಂತಾಗಿದೆ. ಈ ಬಗ್ಗೆ ಚರ್ಚೆಯಾಗಲಿ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದೆಂದು ಕೇಳಬೇಕಾಗುತ್ತೆ: ಆರ್. ಅಶೋಕ್ ತಿರುಗೇಟು

ABOUT THE AUTHOR

...view details