ಕರ್ನಾಟಕ

karnataka

ETV Bharat / city

ಹಳೇ ಸೀರೆ ಅಂತ ಎಸೆಯಲು ಹೊರಟ್ರಾ... ಈ ಸುದ್ದಿ ಓದಿದ್ರೆ ಖಂಡಿತ ಹಾಗೆ ಮಾಡಲ್ಲ!!

ಹಳೆಯ ಸೀರೆಗಳಿಂದ ಸಣ್ಣ ಕುರ್ಚಿಗಳು, ಡೋರ್ ಮತ್ತೆ ಫ್ಲೋರ್ ಮ್ಯಾಟ್, ಪಿಲ್ಲೋ ಕವರ್, ಫೇಸ್ ಮಾಸ್ಕ್, ಪರ್ಸ್ ಹೀಗೆ ಉಪಯುಕ್ತ ವಸ್ತುಗಳನ್ನು ಕೊಲ್ಕತ್ತಾದ ಅನಕ್ಷರಸ್ಥ ಮಹಿಳೆಯರು ತಯಾರಿಸುತ್ತಾರೆ.

making-ornamental-items-from-old-sarees
ಹಳೆಯ ಸೀರೆಗಳಿಂದ ತಯಾರಾಗುತ್ತಿವೆ ಅಲಂಕಾರಿಕ ವಸ್ತುಗಳು

By

Published : Nov 26, 2020, 6:46 PM IST

ಬೆಂಗಳೂರು:ಸಾಮಾನ್ಯವಾಗಿಹಳೆಯದಾದ ಸೀರೆಗಳನ್ನು ಚಿಕ್ಕ ಮಕ್ಕಳ ತೂಗುಯ್ಯಾಲೆಗೆ, ಅವು ಕೊಂಚ ದುಬಾರಿಯಾಗಿದ್ದರೆ ಪುಣಾಣಿಗಳಿಗೆ ಲಂಗ-ದಾವಣಿ ಮಾಡಿಸುತ್ತೇವೆ. ಇನ್ನು ಹಳ್ಳಿಗಳ ಕಡೆ ಬಿಸಾಡುವ ಸೀರೆಗಳನ್ನು ಹಗ್ಗವಾಗಿ ಪರಿವರ್ತಿಸಿಕೊಳ್ಳುವುದನ್ನು ನೋಡಿದ್ದೇವೆ...

ಆದರೆ, ಇಲ್ಲೊಬ್ಬರು ಹಳೆಯ ಕಾಟನ್ ಮತ್ತು ಸಿಂಥಿಟಿಕ್ ಸೀರೆಗಳನ್ನು ಬಳಸಿ ವಿವಿಧ ರೀತಿಯ ಮನೆ ಅಲಂಕಾರಿಕ ವಸ್ತುಗಳು, ಮಹಿಳೆಯರು ಬಳಸುವ ಕೈಚೀಲಗಳನ್ನು ತಯಾರಿಸಿದ್ದಾರೆ. ಸ್ಟೂಲ್‌ನಂತಹ ಸಣ್ಣ ಕುರ್ಚಿಗಳು, ಡೋರ್ ಮತ್ತೆ ಫ್ಲೋರ್ ಮ್ಯಾಟ್, ಪಿಲ್ಲೋ ಕವರ್, ಫೇಸ್ ಮಾಸ್ಕ್, ಪರ್ಸ್ ಹೀಗೆ ಉಪಯುಕ್ತ ವಸ್ತುಗಳನ್ನು ಪರಿಚಯಿಸಿದ್ದಾರೆ.

ಹಳೆಯ ಸೀರೆಗಳಿಂದ ತಯಾರಾಗುತ್ತಿವೆ ಅಲಂಕಾರಿಕ ವಸ್ತುಗಳು

ಒಂದು ವಸ್ತು ತಯಾರಿಸಲು ಹಲವಾರು ಬಣ್ಣದ, ಬೇರೆ, ಬೇರೆ ವಿನ್ಯಾಸಗಳನ್ನು ಹೊಂದಿರುವ ಸೀರೆಗಳನ್ನು ಬಳಸಲಾಗುತ್ತದೆ. ಕೇವಲ ಹಳೆಯ ಸೀರೆಯಷ್ಟೆ ಅಲ್ಲದೆ, ಹರಿದ ಸೀರೆಗಳನ್ನು ಉಪಯೋಗಿಸಲಾಗುತ್ತದೆ. ಸೀರೆಗಳನ್ನು ತೆಗೆದುಕೊಂಡು ಕೈಮಗ್ಗ ಯಂತ್ರದಲ್ಲಿ ಹಾಕಿ ವಿನ್ಯಾಸ ಮಾಡಲಾಗುತ್ತದೆ.

ಇದನ್ನೂ ಓದಿ...ಬೆಂಗಳೂರು-ಸ್ಯಾನ್​ಫ್ರಾನ್ಸಿಸ್ಕೋ ನಡುವೆ ತಡೆ ರಹಿತ ವಿಮಾನ ಸಂಪರ್ಕ: ಎಷ್ಟು ಗಂಟೆ ಜರ್ನಿ ಗೊತ್ತಾ?

ವಿಶೇಷ ಅಂದರೆ ಈ ವಸ್ತುಗಳನ್ನು ಕೊಲ್ಕತ್ತಾದ ಅನಕ್ಷರಸ್ಥ ಮಹಿಳೆಯರು ತಯಾರಿಸುತ್ತಾರೆ. ಈ ವಸ್ತುಗಳನ್ನು ಖರೀದಿಸುವ ಅಂಗಡಿಗಳು ಗ್ರಾಹಕರಿಂದ ಬರುವ ಬಹುತೇಕ ಲಾಭದ ಹಣವನ್ನು ಆ ಮಹಿಳೆಯರಿಗೆ ನೀಡಲಾಗುತ್ತದೆ. ಅದರಲ್ಲೂ ವಿಶೇಷ ಚೇತನರಿರುವ ಮಕ್ಕಳ ತಾಯಂದಿರಿಗೆ ಹೆಚ್ಚು ಧನ ಸಹಾಯ ಮಾಡಲಾಗುತ್ತದೆ.

ABOUT THE AUTHOR

...view details