ಕರ್ನಾಟಕ

karnataka

ETV Bharat / city

"ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್": ಕಾಂಗ್ರೆಸ್ ಟ್ವೀಟ್​​​​​ - ಕರ್ನಾಟಕ ಬಜೆಟ್ 2021-22

ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ ಬೋಗಸ್ ಬಜೆಟ್ ಇದು. ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್" ಎಂದು ಹೇಳಿದೆ.

kpcc-tweet-about-budget2021
budget2021

By

Published : Mar 8, 2021, 3:57 PM IST

Updated : Mar 8, 2021, 6:36 PM IST

ಬೆಂಗಳೂರು: "ಸಾಲ ಮಾಡಿದರೂ ತುಪ್ಪ ತಿನ್ನಿಸಲಾಗದ ಬಜೆಟ್" ಎಂದು ರಾಜ್ಯ ಹಣಕಾಸು ಬಜೆಟ್ಟನ್ನು ಕಾಂಗ್ರೆಸ್ ಪಕ್ಷ ಒಂದು ವಾಕ್ಯದಲ್ಲಿ ವಿಶ್ಲೇಷಿಸಿದೆ.

ಬೋಗಸ್ ಬಜೆಟ್ ಎಂದು ಬಣ್ಣಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ ಬೋಗಸ್ ಬಜೆಟ್ ಇದು. ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ "ಕೊರತೆ ಬಜೆಟ್" ಎಂದು ಹೇಳಿದೆ.

ರಾಜ್ಯ ಸರ್ಕಾರದ ಇಂದಿನ ಹಣಕಾಸು ಬಜೆಟ್ ಮಂಡನೆ ಕಾಂಗ್ರೆಸ್ ಪಕ್ಷವು ಉಭಯ ಸದನಗಳಲ್ಲಿಯೂ ಬಹಿಷ್ಕರಿಸಿ ಹೊರನಡೆದಿತ್ತು. ಸರ್ಕಾರ ಬಜೆಟ್ ಮಂಡಿಸುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.

ವಿಧಾನಸಭೆ ಹಾಗೂ ವಿಧಾನ ಪರಿಷತ್​ಗಳಲ್ಲಿ ಬಜೆಟ್ ಮಂಡನೆ ವೇಳೆ ಕಪ್ಪುಪಟ್ಟಿ ಧರಿಸಿ ತೆರಳಿದ್ದ ಕಾಂಗ್ರೆಸ್ ನಾಯಕರು ಆಯವ್ಯಯವನ್ನು ತಿರಸ್ಕರಿಸಿದ್ದರು. ಇದೀಗ ಪಕ್ಷದ ಅಧಿಕೃತ ಟ್ವೀಟ್ ಖಾತೆಯಲ್ಲಿ ಸಹ ಪ್ರಸಕ್ತ ಬಜೆಟ್ ಲೇವಡಿ ಮಾಡಲಾಗಿದೆ.

Last Updated : Mar 8, 2021, 6:36 PM IST

ABOUT THE AUTHOR

...view details