ಕರ್ನಾಟಕ

karnataka

ETV Bharat / city

ಕೆಪಿಸಿಸಿಗೆ 23ನೇ ಅಧ್ಯಕ್ಷರಾದ ಡಿಕೆಶಿ : ರಾಜ್ಯದಲ್ಲಿ ಕೈ ಸಾರಥ್ಯ ವಹಿಸಿದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ ..!

ರಾಜಕೀಯ ಗತವೈಭವ ಕಾಣದೆ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದು ಮತ್ತೆ ಅಧಿಕಾರದ ಗದ್ದುಗೆ ಏರಿಸಲು ಎಐಸಿಸಿ ರಾಜ್ಯಕ್ಕೆ 23ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿ. ಕೆ. ಶಿವಕುಮಾರ ಅವರನ್ನು ನೇಮಕ ಮಾಡಿದೆ. ಈ ಹಿಂದಿದ್ದ ಅಧ್ಯಕ್ಷರ ಪಟ್ಟಿ ಈ ಕೆಳಗಿನಂತಿದೆ.

kpcc-president-list
ಕೆಪಿಸಿಸಿ

By

Published : Mar 14, 2020, 3:41 AM IST

ಬೆಂಗಳೂರು: ಕೈ ಕಳೆಗುಂದಿದೆ, ರಾಜಕೀಯ ಗತವೈಭವ ಕಾಣದೆ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಮತ್ತೆ ಅಧಿಕಾರದ ಗದ್ದುಗೆ ಏರಿಸಲು ಎಐಸಿಸಿ ರಾಜ್ಯಕ್ಕೆ 23ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿ. ಕೆ. ಶಿವಕುಮಾರ ಅವರನ್ನು ನೇಮಕ ಮಾಡಿದೆ.

ದೇಶದ ಬೃಹತ್ ಪಕ್ಷವಾಗಿ ತಲೆ ಎತ್ತಿ ನಿಂತಿರುವ ಕಾಂಗ್ರೆಸ್​ ತನ್ನದೆಯಾದ ಮಹತ್ವವನ್ನು ಹೊಂದಿದ್ದು ಅಭೂತ ಪೂರ್ವ ಘಟಾನಾವಳಿಗಳಿಗೂ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸದ್ಯ ಆಡಳಿತ ಕಳೆದುಕೊಂಡಿದ್ದರೂ, ಒಂದಾನೊಂದು ಕಾಲದಲ್ಲಿ ಕೈ ಮಣಿಸಲು ಇತರೆ ಪಕ್ಷಗಳು ಹರಸಾಹಸ ಪಡಬೇಕಿತ್ತು.

ಕೆಪಿಸಿಸಿ ಅಧ್ಯಕ್ಷರ ಹಾಗೂ ಅವರು ಕಾರ್ಯನಿರ್ವಹಿಸಿದ ಕಾಲಾವಧಿಯ ವಿವರ ಇಂತಿದೆ.

ದೇವರಾಜ ಅರಸ್‌: 1970-1972, ಕೆ.ಎಚ್‌. ರಂಗನಾಥ್: 1972-74 ಹಾಗೂ 1985-1986, ಕೆ.ಎಚ್‌. ಪಾಟೀಲ್‌: 1974-79, 1983-1985, ಎಸ್‌. ಬಂಗಾರಪ್ಪ: 1979-1980, ಕೆ.ಎಚ್‌. ರಾಥೋಡ್‌: 1980-1983, ಆಸ್ಕರ್‌ ಫರ್ನಾಂಡಿಸ್‌: 1986-87, 1989-1992, ಜನಾರ್ಧನ ಪೂಜಾರಿ: 1987-1988, 2003-2005, ವೀರೇಂದ್ರ ಪಾಟೀಲ್‌: 1988-1989, ವಿ. ಕೃಷ್ಣ ರಾವ್: 1992-1995, ಡಿ.ಕೆ. ನಾಯ್ಕರ್‌: 1995-1996, ಧರ್ಮಸಿಂಗ್‌: 1996-1999, ಎಸ್‌.ಎಂ.ಕೃಷ್ಣ: 1999-2000, ವಿ.ಎಸ್. ಕೌಜಲಗಿ: 2000-2001, ಅಲ್ಲಂ ವೀರಭದ್ರಪ್ಪ: 2001-2003, ಮಲ್ಲಿಕಾರ್ಜುನ ಖರ್ಗೆ: 2005-2008, ಆರ್.ವಿ. ದೇಶಪಾಂಡೆ: 2008-2010, ಡಾ.ಜಿ.ಪರಮೇಶ್ವರ: 2010-2018, ದಿನೇಶ್ ಗುಂಡೂರಾವ್: 2018-19, ಡಿ.ಕೆ. ಶಿವಕುಮಾರ್‌: 2020

ಈ ಹಿಂದೆ ನಾಲ್ವರು ಎರಡು ಸಾರಿ ಅಧ್ಯಕ್ಷರಾಗಿದ್ದನ್ನು ಹೊರತುಪಡಿಸಿದರೆ ಉಳಿದೆಲ್ಲ ಮಹನೀಯರು ಕೇವಲ ಒಂದು ಸಾರಿ ಮಾತ್ರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವೆಂದರೆ ಕೆಪಿಸಿಸಿ ಅಧ್ಯಕ್ಷರಾಗಿ ಸುದೀರ್ಘ ಅವಧಿ ಕಾರ್ಯನಿರ್ವಹಿಸಿದವರು ಡಾ. ಜಿ. ಪರಮೇಶ್ವರ್. ನಿರಂತರ ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯಕ್ಕೆ ಕಾಂಗ್ರೆಸ್​ ತನ್ನ ನೂತನ ಸಾರಥಿಯನ್ನು ನೇಮಕ ಮಾಡಿದ್ದು ಮಕಾಡೆ ಮಲಗಿರುವ ಕಾಂಗ್ರೆಸನ್ನು ಅಧಿಕಾರಿಕ್ಕೆ ತರುವ ಸಂಪೂರ್ಣ ಜವಾಬ್ದಾರಿ ಡಿಕೆಶಿಗೆ ವಹಿಸಿದೆ.

ABOUT THE AUTHOR

...view details