ಬೆಂಗಳೂರು: ರಾಜಕಾರಣದಲ್ಲಿ ಕೇವಲ ಭ್ರಷ್ಟಾಚಾರ ತುಂಬಿದೆ. ಒಂದನ್ನು ಮುಚ್ಚಿ ಹಾಕಲು ಮತ್ತೊಂದು ಭ್ರಷ್ಟಾಚಾರ ಬಯಲಿಗೆಳೆಯಲಾಗುತ್ತದೆ. ಭ್ರಷ್ಟಾಚಾರದ ಸಮರ್ಥನೆ ಮಾಡಿಕೊಳ್ಳುವ ಕಾರ್ಯ ಆಗುತ್ತಿದೆ. ಆದರೆ ಇದೇ ರೀತಿ ಮುಂದುವರೆಯುತ್ತಾ ಹೋದರೆ ಅದರಿಂದ ರಾಜ್ಯದ ರಾಜಕಾರಣ ಮತ್ತು ಸಮಾಜದ ಇನ್ನಷ್ಟು ಹಾಳಾಗುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ಬೆಂಬಲ ಬೆಲೆ ಸರಿಯಾಗಿ ನೀಡಿ: ದೇಶಾದ್ಯಂತ ಕೇಂದ್ರ ಸರ್ಕಾರ ಎಂ.ಎಸ್.ಪಿ (ಕನಿಷ್ಠ ಬೆಂಬಲ ಬೆಲೆ) ನೀಡಬೇಕು ಎಂದು ಘೋಷಿಸಿದೆ. ಅದು ರಾಜ್ಯದಲ್ಲಿ ಸರಿಯಾಗಿ ಜಾರಿಯಾಗಬೇಕು. ರೈತರಿಗೆ ಉಪಯೋಗ ಆಗುವಂತೆ ಹಾಗೂ ತಲುಪುವಂತೆ ಮಾಡಬೇಕು. ಮುಂಗಾರು ಆರಂಭವಾಗಿದ್ದು, ರಾಸಾಯಿನಿಕ ಗೊಬ್ಬರಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.
ಒಂದು ಭ್ರಷ್ಟಾಚಾರ ಮುಚ್ಚಿ ಹಾಕಲು ಮತ್ತೊಂದು ಪ್ರಕರಣ ಮುನ್ನೆಲೆಗೆ ತರಲಾಗುತ್ತದೆ- ಕೋಡಿಹಳ್ಳಿ ಪಠ್ಯ ಪುಸ್ತಕ ಪರಿಷ್ಕರಣೆ ವಾದ ವಿವಾದ ಬೇಡ:ಮಕ್ಕಳ ಜೀವನದೊಂದಿಗೆ ಚೆಲ್ಲಾಟ ಬೇಡ. ಪಠ್ಯ ಪುಸ್ತಕ ಪರಿಷ್ಕರಣೆ ವಾದ ವಿವಾದದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ, ಆದರೆ ಸರಿಯಾದ ದಾರಿಯಲ್ಲಿ ಇರಲಿ ಎಂದು ಹೇಳಿದರು.
ರೈತ ಸಂಘದಲ್ಲಿ ಯಾವುದೇ ಬಿರುಕು ಇಲ್ಲ:ರೈತ ಸಂಘದಲ್ಲಿ ಯಾವುದೇ ಬಿರುಕು ಇಲ್ಲ. ಎಲ್ಲವೂ ಸರಿಯಾಗಿಯೇ ಇದೆ. ನಾನು ಮುಂಚಿನ ರೀತಿಯಲ್ಲೇ ಅಧಿಕಾರದಲ್ಲಿದೆ. ಯಾರು ಏನು ಹೇಳಿದರು ನಾನೇ ಈಗ ಅಧಿಕಾರದಲ್ಲಿ ಇರುವುದು. ಬೇರೆಯವರು ಹೇಳಿದ ಮಾತಲ್ಲೇ ಸುಳ್ಳು. ಸುಖಾ ಸುಮ್ಮನೆ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಜಿ ಪರಮೇಶ್ವರ್