ಕರ್ನಾಟಕ

karnataka

ETV Bharat / city

ಕೇದಾರನಾಥದಲ್ಲಿ ಭೂಕುಸಿತ: ಕರ್ನಾಟಕದ ಯಾತ್ರಾರ್ಥಿ ಸಾವು - lincholi

ಕೇದಾರನಾಥದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕರ್ನಾಟಕದ ಯಾತ್ರಿ ಮೃತಪಟ್ಟಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿದೆ.

kedarnath

By

Published : Jul 13, 2019, 8:34 PM IST

ಉತ್ತರಖಂಡ: ಕೇದಾರನಾಥಕ್ಕೆ ಸಾಗುವ ಕಾಲುದಾರಿಯಲ್ಲಿ ಉಂಟಾದ ಭೂಕುಸಿತದಿಂದಾಗಿ ಕರ್ನಾಟಕದ ಯಾತ್ರಾರ್ಥಿ ಸಾವನ್ನಪ್ಪಿದ್ದಾರೆ.

ಮೃತರನ್ನು ಬೆಂಗಳೂರಿನ ಬಸವನಗುಡಿ ನಿವಾಸಿ ಸೋಮಶೇಖರ್ ಅವರ ಪುತ್ರ ಭರತ್ (52 ವರ್ಷ) ಎಂದು ಗುರುತಿಸಲಾಗಿದೆ.

ಕೇದಾರನಾಥಕ್ಕೆ ಕಾಲುದಾರಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಭೂಕುಸಿತ ಉಂಟಾದಾಗ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಲಿಂಚೋಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದ್ರೂ, ವೈದ್ಯರು ಅವರನ್ನು ಮೃತರೆಂದು ಘೋಷಿಸಿದ್ದಾರೆ.

ಇದೀಗ ಕೇದಾರನಾಥ ಯಾತ್ರೆಯಲ್ಲಿ ಮೃತಪಟ್ಟಿರುವವರ ಸಂಖ್ಯೆ 49ಕ್ಕೆ ಏರಿದೆ.

ABOUT THE AUTHOR

...view details