ರಾಜ್ಯದಲ್ಲಿಂದು 40,741 ಮಂದಿ ಡಿಸ್ಚಾರ್ಜ್:26,811 ಜನರಿಗೆ ಸೋಂಕು ದೃಢ; 530 ಬಲಿ
ರಾಜ್ಯದಲ್ಲಿಂದು 26,811 ಮಂದಿಗೆ ಸೋಂಕು ದೃಢಪಟ್ಟಿದ್ದು, 530 ಸೋಂಕಿತರು ಕೋವಿಡ್ಗೆ ಬಲಿಯಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿಂದು 26,811 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 24,99,784ಕ್ಕೆ ಏರಿಕೆ ಆಗಿದೆ. 40,741 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ತನಕ 20,62,910 ಜನರು ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 4,09,924 ರಷ್ಟು ಇದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 19.48 ರಷ್ಟಿದ್ದು, ಸಾವಿನ ಶೇಕಡವಾರು ಪ್ರಮಾಣ 1.97 ರಷ್ಟು ಇದೆ. ಕೋವಿಡ್ ಗೆ 530 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 26,929ಕ್ಕೆ ಏರಿಕೆ ಕಂಡಿದೆ.
ಎರಡೇ ತಿಂಗಳಲ್ಲಿ ವರ್ಷದ ಸಾವಿನ ಲೆಕ್ಕ ಬ್ರೇಕ್ ಮಾಡಿದ ಕೊರೊನಾ
ರಾಜ್ಯದಲ್ಲಿ ಕೊರೊನಾ ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ರಣಭೀಕರವಾಗಿದೆ. ಯಾಕೆಂದರೆ ಮೊದಲ ಅಲೆಯಲ್ಲಿ ಇಡೀ ಒಂದು ವರ್ಷ ಸಾವನ್ನಪ್ಪಿದವರಿಗಿಂತ ಕಳೆದ ಎರಡು ತಿಂಗಳಲ್ಲಿ ಮೃತಪಟ್ಟವರೇ ಹೆಚ್ಚು.. ಅದರಲ್ಲೂ ಎರಡನೇ ಅಲೆಯಲ್ಲಿ ಯುವಕರು, ಮಧ್ಯಮ ವಯಸ್ಕರಿಗೆ ಕಂಟಕ ಎದುರಾಗಿದೆ. ಮೊದಲ ಅಲೆಯ ಸಂದರ್ಭದಲ್ಲಿ 12,567 ಸೋಂಕಿತರು ಬಲಿಯಾಗಿದ್ದರು. ಆದರೆ, ಯುವಕರು, ಮಧ್ಯಮ ವಯಸ್ಕರು ಕಡಿಮೆ ಸಂಖ್ಯೆಯಲ್ಲಿ ಬಲಿಯಾಗಿದರು..
ಆದರೆ ಎರಡನೇ ಅಲೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಅಂದಹಾಗೇ ರಾಜ್ಯದಲ್ಲಿ ಇಲ್ಲಿ ತನಕ 26,929 ಮಂದಿ ಕೊರೊನಾದಿಂದ ಮೃತರಾಗಿದ್ದಾರೆ. ಈ ಪೈಕಿ ಎರಡನೇ ಅಲೆಯಲ್ಲಿ 14,362 ಮಂದಿ ಬಲಿಯಾಗಿದ್ದಾರೆ. ಕೇವಲ ಎರಡೇ ತಿಂಗಳಲ್ಲೇ ಒಂದು ವರ್ಷದ ಸಾವಿನ ಲೆಕ್ಕವನ್ನೇ ಹಿಂದಿಕ್ಕಿದೆ.