ಬೆಂಗಳೂರು:ಕರ್ನಾಟಕದಲ್ಲಿಂದು 41,664 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 21,71,931ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 41,664 ಮಂದಿಗೆ ಸೋಂಕು: 6 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು - ಭಾರತ ಲಾಕ್ಡೌನ್
ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ 41 ಸಾವಿರ ಗಡಿ ದಾಟಿದೆ. ಇಂದು 349 ಜನ ಕೋವಿಡ್ಗೆ ಬಲಿಯಾಗಿದ್ದಾರೆ.
c
ಇಂದು 34,425 ಮಂದಿ ಗುಣಮುಖರಾಗಿದ್ದು, ಈವರೆಗೆ 15,44,982 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,05,494 ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 35.20 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 0.83 ರಷ್ಟು ಇದೆ.
ಕೋವಿಡ್ಗೆ 349 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 21,434ಕ್ಕೆ ಏರಿದೆ. ಯುಕೆಯಿಂದ ಇಂದು 53 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ.(ಲ್ಯಾನ್ಸೆಟ್ ಕೋವಿಡ್ -19 ಕಮಿಷನ್: ಹೀಗಿದೆ ಇಂಡಿಯಾ ಟಾಸ್ಕ್ ಫೋರ್ಸ್ ರಾಷ್ಟ್ರೀಯ ಆ್ಯಕ್ಷನ್ ಪ್ಲಾನ್!)