ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇಂದು 1,39,090 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 973 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,56,137ಕ್ಕೆ ಏರಿಕೆ ಕಂಡಿದೆ.
ಕರ್ನಾಟಕ ಕೋವಿಡ್ ರಿಪೋರ್ಟ್ : ಇಂದು 973 ಮಂದಿಗೆ ಕೊರೊನಾ,17 ಸೋಂಕಿತರ ಸಾವು - ಕೋವಿಡ್ ಅಪ್ಡೇಟ್
ರಾಜ್ಯದಲ್ಲಿ ಇಂದು ಸಾವಿರಕ್ಕಿಂತ ಕಡಿಮೆ ಕೊರೊನಾ ಕೇಸ್ಗಳು ಕಂಡು ಬಂದಿವೆ. ಈ ಮೂಲಕ ದಿನದಿಂದ ದಿನಕ್ಕೆ ಸೋಂಕು ಹತೋಟಿಗೆ ಬರುತ್ತಿದೆ..
corona
ಪಾಸಿಟಿವಿಟಿ ದರ ಶೇ.0.69 ರಷ್ಟಿದೆ. ಇಂದು 1071 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 29,01,299 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 17,386 ರಷ್ಟಿವೆ. 17 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,426ಕ್ಕೆ ಏರಿದೆ. ಸಾವಿನ ಶೇಕಡಾವಾರು 1.74 ರಷ್ಟಿದೆ.