ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
'ಸಾಯಂಕಾಲದ ಪೆಟ್ರೋಲ್' ಹಾಕಿದ್ದ ನಿಮ್ಮ ಗಾಡಿ ಎಲ್ಲೆಲ್ಲಿಗೋ ಹೋಗಿ ಎರಡು ಜೀವ ತೆಗೆದಿತ್ತು ಸಿಟಿ ರವಿ ಅವರೇ. ಜನತೆಗೆ ಬೆಲೆ ಏರಿಕೆಯ ಚಿಂತೆ, ರಾಜಕಾರಿಣಿ ರವಿಯವರಿಗೆ 'ಸಾಯಂಕಾಲದ ಪೆಟ್ರೋಲ್' ಚಿಂತೆ. ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ನಿಮ್ಮ ಪ್ರತಿಕ್ರಿಯೆ ಇದೇನಾ ರಾಜ್ಯ ಬಿಜೆಪಿ ನಾಯಕರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಾಜ್ಯ ಕಾಂಗ್ರೆಸ್ ಟ್ಟೀಟ್ ಅಭಿವೃದ್ಧಿ ವಿಚಾರವಾಗಿ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. 25 ಸಂಸದರೂ ಬಿಜೆಪಿಯವರೇ, ಈಶ್ವರಪ್ಪನವರೂ ಸಹ ಬಿಜೆಪಿಯವರೇ. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವುದು ಈಶ್ವರಪ್ಪನವರಿಗೆ ಚಿಟಕಿ ಹೊಡೆದಷ್ಟೇ ಸುಲಭದ ಕೆಲಸ. ಆದ್ರೆ ಈ ಹೋರಾಟವೇಕೆ? ಈ ಕುರಿತು ರಾಜ್ಯ ಬಿಜೆಪಿಗೆ ಉತ್ತರಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದೆ.
ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಬೀಜ, ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಕೊಂದ ರಾಜ್ಯ ಬಿಜೆಪಿ ಪಕ್ಷಕ್ಕೆ ಕ್ರೌರ್ಯ ಸಾಮಾನ್ಯ ವಿಷಯವೇ ಬಿಡಿ. ಹಸಿರು ಶಾಲಿನ ಬಿ.ಎಸ್.ಯಡಿಯೂರಪ್ಪ ಆಡಳಿತದಲ್ಲಿ ಪ್ರವಾಹ ಪರಿಹಾರವಿಲ್ಲ. ಸಾಲ ಮನ್ನಾವಿಲ್ಲ, ತೊಗರಿ, ಭತ್ತಕ್ಕೆ ಎಂಎಸ್ಪಿ ಇಲ್ಲ. ಯುಪಿಎ ಅವಧಿಗಿಂತ ಶೇ. 150 ಎಂಎಸ್ಪಿ ಇಳಿಸಿದ್ದನ್ನು ಮಲ್ಲಿಕಾರ್ಜುನ ಖರ್ಗೆ ದಾಖಲೆ ಸಮೇತ ನಿಮ್ಮ ಯೋಗ್ಯತೆ ವಿವರಿಸಿದ್ದಾರೆ ಕೇಳಿ ಎಂದಿದೆ.
ಇದಕ್ಕೂ ಮುನ್ನ ಬಿಜೆಪಿ ತಾನು ಮಾಡಿದ್ದ ಟ್ವೀಟ್ನಲ್ಲಿ, ಯುಪಿಎ ಆಡಳಿತಾವಧಿಯಲ್ಲಿ ರೈತರು ಯೂರಿಯಾಕ್ಕಾಗಿ ಪರದಾಡಬೆಕಾಗಿತ್ತು. ಯೂರಿಯಾ ಲಭ್ಯತೆಗಾಗಿ ಹೋರಾಟ ನಡೆಸುವ ರೈತರ ಮೇಲೆ ಪೊಲೀಸರು ಗುಂಡು ಹಾರಿಸುವುದು ಸಾಮಾನ್ಯವಾಗಿತ್ತು. ಧನ್ಯವಾದಗಳು ನರೇಂದ್ರ ಮೋದಿ. ರೈತರಿಗೆ ಈಗ ಯೂರಿಯಾ ಅಭಾವ ಕಾಡುತ್ತಿಲ್ಲ. ಕಾಳಸಂತೆಕೋರರ ಪರವಾಗಿ ರಾಷ್ಟ್ರೀಯ ಕಾಂಗ್ರೆಸ್ ಕೆಲಸ ಮಾಡಲು ಕಾರಣವೇನು? ಹೇಳಿ ಎಂದು ಕೇಳಿತ್ತು.