ಕರ್ನಾಟಕ

karnataka

ETV Bharat / city

ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್‌ ಪಟ್ಟು ​: ವಿಧಾನಸಭೆ ಅಧಿವೇಶನ ಮಾರ್ಚ್‌ 4ರವರೆಗೆ ಮುಂದೂಡಿಕೆ

ಕೈ ಶಾಸಕರ ಪ್ರತಿಭಟನೆ, ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ, ಕರ್ನಾಟಕ ಸಚಿವರ ಸಂಬಳ ಭತ್ಯೆ, ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕರಿಸಲಾಯಿತು. ನಂತರ ಸಿಎಂ, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿದರೂ ಕಾಂಗ್ರೆಸ್ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸದನವನ್ನು ಮಾರ್ಚ್ 4ರವರೆಗೆ ಮುಂದೂಡಿದರು..

Karnataka Assembly Adjourns till March 4
Karnataka Assembly Adjourns till March 4

By

Published : Feb 22, 2022, 1:07 PM IST

Updated : Feb 22, 2022, 7:52 PM IST

ಬೆಂಗಳೂರು :ಸಚಿವಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಇಂದು ಕೂಡ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದರಿಂದ ಅಧಿವೇಶನವನ್ನು ಮಾರ್ಚ್4ರವರೆಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಮುಂದೂಡಿದರು.

ಇಂದು ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು, ರಾಷ್ಟ್ರಧ್ವಜ ವಿಚಾರದಲ್ಲಿ ಈಶ್ವರಪ್ಪ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರಿಸಿದರು. ಇದರಿಂದ ಗರಂ ಆದ ಸ್ಪೀಕರ್, ಈಗಾಗಲೇ 5 ದಿನ ಸದನದ ಸಮಯ ಹಾಳಾಗಿದೆ.

ವಿಧಾನಸಭೆ ಕಲಾಪ

ಪ್ರಶ್ನೋತ್ತರದಲ್ಲಿ ಭಾಗಿಯಾಗಿ, ಸದನದ ಸಮಯ ಹಾಳು ಮಾಡಬೇಡಿ. ನೀವು ನಿಮ್ಮ ಪ್ರತಿಭಟನೆ ಮುಂದುವರೆಸಿದರೆ ನಾನು ನನ್ನ ಕೆಲಸ ಮುಂದುವರೆಸುತ್ತೇನೆ ಎಂದರು.

ಬಳಿಕ ಕೈ ಶಾಸಕರ ಪ್ರತಿಭಟನೆ, ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ, ಕರ್ನಾಟಕ ಸಚಿವರ ಸಂಬಳ ಭತ್ಯೆ, ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕರಿಸಲಾಯಿತು. ನಂತರ ಸಿಎಂ, ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿದರೂ ಕಾಂಗ್ರೆಸ್ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸದನವನ್ನು ಮಾರ್ಚ್ 4ರವರೆಗೆ ಮುಂದೂಡಿದರು.

ಪರಿಷತ್​ನಲ್ಲಿ ಮುಂದುವರಿದ ಕಾಂಗ್ರೆಸ್ ಧರಣಿ ; ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ:ವಿಧಾನ ಪರಿಷತ್ ಕಲಾಪದಲ್ಲಿಯೂ ಸಹ ಕಾಂಗ್ರೆಸ್ ಧರಣಿ ಮುಂದುವರಿಯಿತು. ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಗಳು ಪ್ರಶ್ನೋತ್ತರ ಅವಧಿಗೆ ಮುಂದಾದರು. ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ನಾವು ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಹೋರಾಟ ನಿಲ್ಲಿಸಲ್ಲ.

ತಮ್ಮ ಮಾತಿಗೆ ಬೆಲೆ ಕೊಟ್ಟು ಪ್ರಶ್ನೋತ್ತರಕ್ಕೆ ವಿರೋಧ ಮಾಡಲ್ಲ. ಕೇವಲ ಮಂಡಿಸಿ ಕೈಬಿಡಿ ಎಂದರು. ಕನಿಷ್ಠ ಪ್ರಶ್ನೋತ್ತರ ಅವಧಿ ಎರಡು ನಿಮಿಷ ಆದರೂ ಮಾಡಲು ಅವಕಾಶ ನೀಡಿ ಎಂದರು. ಅದಕ್ಕೆ ಒಪ್ಪದ ಪ್ರತಿಪಕ್ಷ ನಾಯಕರು, ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು.

ವಿಧಾನಸಭೆ ಕಲಾಪ

ಸದಸ್ಯರು ದನಿಗೂಡಿಸಿದರು. ಇನ್ನೊಂದೆಡೆ ಸಭಾಪತಿಗಳು ಪ್ರಶ್ನೋತ್ತರ ಅವಧಿ ಆರಂಭಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಚುಕ್ಕೆ ರಹಿತ ಪ್ರಶ್ನೆಗಳನ್ನು ಸದನಕ್ಕೆ ಮಂಡಿಸಿದರು. ಸಭಾಪತಿಗಳು ಶೂನ್ಯವೇಳೆಗೆ ಅವಕಾಶ ಒದಗಿಸಿದರು.

ವಿಧೇಯಕ ಅನುಮೋದನೆ :ವಿಧಾನಸಭೆಯಿಂದ ಅನುಮೋದನೆಗೊಂಡ ಸಿವಿಲ್‌ ಸೇವೆಗಳ ವಿಧೇಯಕವನ್ನು ಸಿಎಂ ಪರವಾಗಿ ಸಚಿವ ಮಾಧುಸ್ವಾಮಿ ಮಂಡಿಸಿ, ವಿವರಣೆ ನೀಡಿದರು. ವಿಧೇಯಕವನ್ನು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡರು ಸ್ವಾಗತಿಸಿದರು. ನೊಂದ 300 ಮಂದಿಗೆ ನ್ಯಾಯ ಒದಗಿಸುವ ವಿಧೇಯಕ ಸ್ವಾಗತಾರ್ಹ ಅಂದರು. ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, ಬಿಜೆಪಿ ಸದಸ್ಯ ಎಸ್.ವಿ. ಸಂಕನೂರು, ರುದ್ರೇಗೌಡ, ರವಿಕುಮಾರ್, ಹನುಮಂತ ನಿರಾಣಿ ವಿಧೇಯಕವನ್ನು ಸ್ವಾಗತಿಸಿದರು. ವಿಧೇಯಕ ಅಂಗೀಕೃತವಾಯಿತು.

ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ 2022 ಹಾಗೂ ಕರ್ನಾಟಕ ಸ್ಟ್ಯಾಂಪ್ ಎರಡನೇ ತಿದ್ದುಪಡಿ ವಿಧೇಯಕ 2022 ಇವೆರಡನ್ನೂ ಕಂದಾಯ ಸಚಿವ ಆರ್ ಅಶೋಕ್ ಮಂಡಿಸಿ ವಿವರಣೆ ನೀಡಿದರು. ಹೊರೆಯಾಗುವ ತೆರಿಗೆಯನ್ನು ಕಡಿಮೆ ಮಾಡಿದ್ದೇವೆ. ಇ-ಸ್ಟ್ಯಾಂಪಿಗ್‌ಗೆ ಅವಕಾಶ, ಜವಳಿ ಉದ್ಯಮ ಉತ್ತೇಜನಕ್ಕೆ ವಿಶೇಷ ವಿನಾಯಿತಿ ನೀಡುತ್ತಿದ್ದೇವೆ ಎಂದರು. ವಿಧೇಯಕ ಸದನದಲ್ಲಿ ಅಂಗೀಕೃತವಾಯಿತು.

ಕ್ರಿಮಿನಲ್ ಕಾನೂನು ತಿದ್ದುಪಡಿ ಆದ್ಯಾದೇಶ 1944 ವಿಧೇಯಕ 2022 ಗೃಹ ಸಚಿವರ ಪರವಾಗಿ ಸಚಿವ ಮಾಧುಸ್ವಾಮಿ ಮಂಡಿಸಿ ವಿವರಣೆ ನೀಡಿದರು. ಸದಸ್ಯರಾದ ತಿಪ್ಪೇಸ್ವಾಮಿ ವಿಧೇಯಕದ ಮೇಲೆ ಮಾತನಾಡಿದರು. ಸಚಿವರು ತಿಪ್ಪೇಸ್ವಾಮಿ ಪ್ರಶ್ನೆಗೆ ವಿವರಣೆ ನೀಡಿದರು.

Last Updated : Feb 22, 2022, 7:52 PM IST

ABOUT THE AUTHOR

...view details