ಕರ್ನಾಟಕ

karnataka

ETV Bharat / city

'ಕಾಂಗ್ರೆಸ್ ಕುತಂತ್ರದಿಂದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸೋಲು' - ಬಿ.ಎಂ. ಫಾರೂಕ್

ಬಿಜೆಪಿ ಜೊತೆಗೆ ರಹಸ್ಯ ಒಪ್ಪಂದ ಮಾಡಿಕೊಂಡ ಕಾಂಗ್ರೆಸ್​ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿದೆ. ಸುಳ್ಳು ಪ್ರಚಾರದ ಮೂಲಕ ಅಲ್ಪಸಂಖ್ಯಾತ ಮತದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ದೂರಿದ್ದಾರೆ.

jds mlc farroq tonts againest congress leaders
ಕಾಂಗ್ರೆಸ್ ಕುತಂತ್ರದಿಂದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯಥಿರ್ಗಳಿಗೆ ಸೋಲು: ಮೇಲ್ಮನೆ ಸದಸ್ಯ ಬಿ.ಎಂ. ಫಾರೂಕ್ ಆರೋಪ

By

Published : Nov 3, 2021, 4:28 PM IST

ಬೆಂಗಳೂರು:ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳ ಪರಾಜಯಕ್ಕೆ ಕಾಂಗ್ರೆಸ್​ ಕುತಂತ್ರವೇ ಕಾರಣ. ಮುಸ್ಲಿಂ ಹೊಸ ನಾಯಕರು ಉದಯಿಸುವುದು ಕಾಂಗ್ರೆಸ್​ಗೆ ಇಷ್ಟವಿಲ್ಲ ಎನ್ನುವುದು ಫಲಿತಾಂಶದಿಂದ ಸಾಬೀತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್​ನ ಮುಸ್ಲಿಂ ನಾಯಕರು ವಕ್ಫ್​ ಆಸ್ತಿ ಕಬಳಿಕೆ, ಐಎಂಎ ಹಗರಣ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಜೆಡಿಎಸ್​ ಪಕ್ಷ ಹೊಸ ಪೀಳಿಗೆಯ ಮುಸ್ಲಿಂ ನಾಯಕರನ್ನು ಬೆಳೆಸುತ್ತಿದೆ. ಶಾಸಕ ಜಮೀರ್​ ಅಹ್ಮದ್​ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದು ಕುಟುಕಿದರು.

ಬಿಜೆಪಿ ಜೊತೆಗೆ ರಹಸ್ಯ ಒಪ್ಪಂದ ಮಾಡಿಕೊಂಡ ಕಾಂಗ್ರೆಸ್​ ಮುಸ್ಲಿಂ ಅಭ್ಯರ್ಥಿಗಳನ್ನು ಸೋಲಿಸಿದೆ. ಸುಳ್ಳು ಪ್ರಚಾರದ ಮೂಲಕ ಅಲ್ಪಸಂಖ್ಯಾತ ಮತದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ದೂರಿದ್ದಾರೆ. ಸೋಲಿನಿಂದ ಜೆಡಿಎಸ್ ನಾಯಕರು ಧೃತಿಗೆಟ್ಟಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಹೊಸ ಯುವ ಅಭ್ಯರ್ಥಿಗಳನ್ನು ತಯಾರು ಮಾಡುತ್ತೇವೆ. ಪಕ್ಷವನ್ನು ತಳಮಟ್ಟದಿಂದ ಪ್ರಬಲಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details