ಬೆಂಗಳೂರು: ರಸ್ತೆ ಬದಿ ಮೊಬೈಲ್‌ನಲ್ಲಿ ಮಾತನಾಡುತ್ತ ಹೋಗುವವರನ್ನೇ ಟಾರ್ಗೆಟ್ ಮಾಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಸ್ತೆಯ ಕುಂಬಳಗೂಡು ಸಮೀಪದ ಕಂಬೀಪುರ ನಿವಾಸಿ ಸೈಯದ್ ಫವಾಜ್ (25) ಬಂಧಿತ ಆರೋಪಿ. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನು ಆಧರಿಸಿ,ಈತನಿಂದ ಸುಮಾರು15 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಗಳ 65 ಮೊಬೈಲ್ ಫೋನ್ಗಳನ್ನು ಮತ್ತು 2 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಸ್ತೆ ಬದಿ ಮೊಬೈಲ್‌ನಲ್ಲಿ ಮಾತನಾಡುವವರೇ ಈತನ ಟಾರ್ಗೆಟ್: ಖತರ್ನಾಕ್ ಕಳ್ಳ ಅಂದರ್ - ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ
ರಸ್ತೆ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುವವರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತನಿಂದ 15 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಗಳ 65 ಮೊಬೈಲ್ ಫೋನ್ಗಳನ್ನು ಮತ್ತು 2 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 3ರಂದು ಜಯನಗರದ 4ನೇ ಹಂತದಲ್ಲಿ ಮನೋಜ್ ಎಂಬಾತ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಹಿಂದಿನಿಂದ ಆರೋಪಿ ಸೈಯದ್ ಮೊಬೈಲ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಮನೋಜ್ ಸಹಾಯಕ್ಕಾಗಿ ಕೂಗಿದಾಗ ಸಮೀಪದಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸೈಯದ್ನನ್ನು ಬೆನ್ನಟ್ಟಿ ಬಂಧಿಸಿದ್ದಾರೆ.
ಆರೋಪಿಯು ಬೈಕ್ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ, ಅದರಲ್ಲೇ ಸುತ್ತಾಡುತ್ತಿದ್ದ ಜೊತೆಗೆ ಕದ್ದ ಮೊಬೈಲ್ ಗಳನ್ನು ಸೆಕೆಂಡ್ ಹ್ಯಾಂಡ್ ಫೋನ್ ಎಂದು ತಿಳಿಸಿ ಮಾರಾಟ ಮಾಡುತ್ತಿದ್ದ ಎಂದಿದ್ದಾರೆ. ರಸ್ತೆ ಬದಿಯಲ್ಲಿ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಗುರುತಿಸಿ, ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.