ಕರ್ನಾಟಕ

karnataka

ETV Bharat / city

ಪಂಜಾಬ್​ನಲ್ಲೊಬ್ಬ ಸಿಧು, ರಾಜ್ಯದಲ್ಲೊಬ್ಬ ಸಿದ್ದು - ಇಲ್ಲೂ ಕಾಂಗ್ರೆಸ್ ಅವನತಿಯಾಗುತ್ತೆ: ಜಗದೀಶ್ ಶೆಟ್ಟರ್ ಲೇವಡಿ - ದೇಶದಲ್ಲಿ ಕಾಂಗ್ರೆಸ್ ​ಅವನತಿ

ದೇಶದಲ್ಲಿ ಕಾಂಗ್ರೆಸ್ ​ಅವನತಿಯಾಗುತ್ತದೆ. ಪಂಜಾಬ್​ನಲ್ಲಿ ಒಬ್ಬ ನವಜೋತ್​ ಸಿಧು, ರಾಜ್ಯದಲ್ಲೊಬ್ಬ ಸಿದ್ದು ಸೇರಿಕೊಂಡು ಕಾಂಗ್ರೆಸ್​ ಅನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ ಮಾಡಿದರು.

ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್
ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್

By

Published : Mar 10, 2022, 2:26 PM IST

ಬೆಂಗಳೂರು: ಪಂಜಾಬ್​ನಲ್ಲಿ ಒಬ್ಬ ಸಿದ್ದು, ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ಪಂಜಾಬ್ ಸಿಧುರಿಂದ ಅಲ್ಲಿ ಕಾಂಗ್ರೆಸ್ ನಾಶವಾಗಿದೆ.‌ ಇಲ್ಲಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ರಿಂದ ಕಾಂಗ್ರೆಸ್​ಗೆ ಇತಿಶ್ರೀ ಬೀಳಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಟಾಂಗ್ ನೀಡಿದರು.

ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಅವರು, ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಚುನಾವಣಾ ಸಮೀಕ್ಷೆ ಕೂಡ ನಿಜವಾಗಿದೆ. ಉತ್ತರಾಖಂಡ್​ನಲ್ಲಿ ಅಭೂತಪೂರ್ವ ಫಲಿತಾಂಶ ಬಂದಿದೆ. 4 ರಾಜ್ಯಗಳ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು. ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಹಾಗೂ ಭಾರತದ ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.

ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್

100 ವರ್ಷಗಳ ಕಾಂಗ್ರೆಸ್​ಗೆ ನಾಯಕತ್ವದ ಕೊರತೆ ಇದೆ. ಒಂದೇ ಕುಟುಂಬದ ಮೇಲೆ ಅವಲಂಬಿತವಾಗಿರುವುದರಿಂದ ಪಕ್ಷ ನಾಶವಾಗಲಿದೆ. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾದ ಪಕ್ಷ ಅಲ್ಲ. ಇದು ಕಾರ್ಯಕರ್ತರ ಪಕ್ಷ. ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಆಗಲಿದೆ, ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಆಗಲಿದೆ. ಕಾಂಗ್ರೆಸ್ ಪಾದಯಾತ್ರೆ ಹೈಡ್ರಾಮ, ಯಾರೂ ನಂಬಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ರಾಮನಗರದ ಆ ಪ್ರಭಾವಿ ನಾಯಕನಾದರೂ ಯಾರು?: ಯತ್ನಾಳ್​ ಪ್ರಶ್ನೆಗೆ ಹೆಚ್​ಡಿಕೆ ಹೇಳಿದ್ದೇನು?

ABOUT THE AUTHOR

...view details