ಕರ್ನಾಟಕ

karnataka

ETV Bharat / city

ತೆರಿಗೆ ವಂಚನೆ ಆರೋಪ: ಆಭರಣದಂಗಡಿ ಮೇಲೆ ಐಟಿ ದಾಳಿ - ಕಾಂಗ್ರೆಸ್ ಮುಖಂಡ ರಾಮೋಜಿಗೌಡ ಐಟಿ ದಾಳಿ

ತೆರಿಗೆ ವಂಚನೆ ಆರೋಪದಡಿ ರಾಜರಾಜೇಶ್ವರಿ ನಗರದ ಆಭರಣದಂಗಡಿ ಮೇಲೆ‌ ಐಟಿ ರೈಡ್​ ನಡೆಸಿದ್ದಾರೆ‌. ಅಲ್ಲದೇ, ಕಾಂಗ್ರೆಸ್ ಮುಖಂಡ ರಾಮೋಜಿಗೌಡ ಎಂಬುವರ ಮನೆ, ಕಚೇರಿಗಳ ಮೇಲೆ‌ ಆದಾಯ ತೆರಿಗೆ ಅಧಿಕಾರಿಗಳು ದಾಳಿ​ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

it-raid
ಐಟಿ ದಾಳಿ

By

Published : Dec 2, 2021, 3:00 PM IST

ಬೆಂಗಳೂರು:ತೆರಿಗೆ ವಂಚನೆ ಆರೋಪದಡಿ ನಗರದ ಆಭರಣದಂಗಡಿ ಮೇಲೆ‌ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌. ರಾಜರಾಜೇಶ್ವರಿ ನಗರದಲ್ಲಿರುವ ಸಿರಿವೈಭವ್ ಜ್ಯೂವೆಲ್ಲರಿ ಅಂಗಡಿ ಮೇಲೆ ಇಂದು ಬೆಳ್ಳಂಬೆಳ್ಳಗೆ ದಾಳಿ ನಡೆಸಲಾಗಿದೆ. ತೆರಿಗೆ ವಂಚನೆ, ಬಿಲ್​ಗಳಲ್ಲಿ ಅಕ್ರಮ ಸಂಬಂಧ‌ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

IT ride on Ramojigowda : ಮತ್ತೊಂದೆಡೆ, ‌ಕಾಂಗ್ರೆಸ್ ಮುಖಂಡ ರಾಮೋಜಿಗೌಡ ಎಂಬುವರ ಮನೆ, ಕಚೇರಿಗಳ ಮೇಲೆ‌ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌. ಇಂದು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ, ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ರಾಮೋಜಿಗೌಡ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆಸಲಾಗಿದೆ‌. ಬಿಎಸ್ಆರ್ ಡೆವಲಪರ್ಸ್ ಕಂಪನಿ ಮಾಲೀಕರಾಗಿರುವ ರಾಮೋಜಿಗೌಡ ಬೆಂಗಳೂರು ಪದವೀಧರ ಕ್ಷೇತ್ರದಿಂದ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸಿದ್ದರು.

ABOUT THE AUTHOR

...view details