ಕರ್ನಾಟಕ

karnataka

ETV Bharat / city

ಡಿಕೆಶಿ ಮತ್ತೆ ಐಟಿ ಶಾಕ್​! ಸಂಕಷ್ಟದ ಸುಳಿಯಲ್ಲಿ ಮಾಸ್ಟರ್​ಮೈಂಡ್​ - 2ನೇ ನೋಟೀಸ್​

ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಉತ್ತರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ರಿಗೆ ಐಟಿ 2ನೇ ನೋಟೀಸ್​ ಜಾರಿ ಮಾಡಿದೆ

ಡಿ.ಕೆ. ಶಿವಕುಮಾರ್​ಗೆ ಐಟಿ 2ನೇ ನೋಟೀಸ್​ ಜಾರಿ

By

Published : Mar 5, 2019, 5:35 PM IST

ಬೆಂಗಳೂರು: ಬೇನಾಮಿ ಆಸ್ತಿ ಸುಳಿಯಲ್ಲಿ ಸಿಲುಕಿರುವ ಜಲಸಂಪನ್ಮೂಲ ಸಚಿವ ಕೆ.ಡಿ. ಶಿವಕುಮಾರ್ ಐಟಿ ಮತ್ತೊಂದು ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಸರಿಯಾದ ಉತ್ತರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮುಂದಿನ 15 ದಿನಗಳೊಳಗೆ ಬೇನಾಮಿ ಆಸ್ತಿ ಬಗ್ಗೆ ವಿವರಣೆ ನೀಡಿ ಎಂದು ಡಿಕೆಶಿಗೆ ಜಾರಿ ಮಾಡಿರುವ ನೋಟೀಸ್​ನನಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಸಂಬಂಧ ಡಿಕೆಶಿಗೆ ನೀಡಲಾಗುತ್ತಿರುವ 2ನೇ ನೋಟೀಸ್​ ಇದು.

ಮೊದಲು ನೀಡಿಲಾದ ನೋಟಿಸ್​ಗೆ ಸರಿಯಾದ ಉತ್ತರ ಕೋಡದೆ ಡಿಕೆಶಿ ಪದೇ ಪದೇ ಹಾರಿಕೆ ಉತ್ತರ ನೀಡಿ ಜಾರಿಕೊಳ್ತಿದ್ರು ಎನ್ನಲಾಗಿದೆ. ಇದೀಗ ಎರಡನೇ ಬಾರಿ ನೀಡಲಾಗಿರುವ ನೋಟಿಸ್​ಗೆ ಸರಿಯಾದ ಉತ್ತರನೀಡುವಂತೆ ಖಡಕ್ ಎಚ್ಚರಿಕೆಯನ್ನೂನೀಡಲಾಗಿದೆ.

ಒಂದು ವೇಳೆ ಈ ನೋಟೀಸ್​ಗೂ ಸರಿಯಾದ ಉತ್ತರ ಕೊಡದಿದ್ದಲ್ಲಿ ಡಿಕೆಶಿ ಆಸ್ತಿಯನ್ನು ಜಪ್ತಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಡಿಕೆಶಿವಕುಮಾರ್​ರ ಹಲವಾರು ಬೇನಾಮಿ ಆಸ್ತಿ‌ಗಳು ಅವರ ಮಗಳು ಹಾಗೂ ಹೆಂಡತಿ ಹೆಸರಲ್ಲಿವೆ. ಅಲ್ಲದೆ, ವಿದೇಶದಲ್ಲಿಯೂ ಅವರು ಬೇನಾಮಿ ಆಸ್ತಿ ಹೊಂದಿರುವ ಮಾಹಿತಿ ಐಟಿ ದಾಳಿ ವೇಳೆ ತಿಳಿದು ಬಂದಿತ್ತು. ಈ ಬಗ್ಗೆ ಸರಿಯಾದ ಉತ್ತರ ನೀಡುವಂತೆ ಐಟಿ ಮತ್ತೆ ನೋಟಿಸ್ ನೀಡಿದ್ದು, ಡಿಕೆಶಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದೇ ಹೇಳಲಾಗ್ತಿದೆ.

ABOUT THE AUTHOR

...view details