ಕರ್ನಾಟಕ

karnataka

ಮಗು ಮುಖ ನೋಡಲು ಹೆಂಡತಿ ಮನೆ ಮುಂದೆ ಧರಣಿ ಕುಳಿತ ಐಪಿಎಸ್ ಅಧಿಕಾರಿ

By

Published : Feb 9, 2020, 10:04 PM IST

ಐಪಿಎಸ್ ಅಧಿಕಾರಿಗಳಿಬ್ಬರು ಪ್ರೀತಿಸಿ ಮದುವೆಯಾಗಿ ಮಗುವಾದ ಬಳಿಕ ಮನಸ್ತಾಪದಿಂದ ದೂರವಾಗಿದ್ದು, ಮಗು ನೋಡಲು ಪತ್ನಿ ಬಿಡುತ್ತಿಲ್ಲ ಎಂದು ಆರೋಪಿಸಿ ಕಲಬುರಗಿ ಎಸ್‌ಪಿ ಅರುಣ್ ರಂಗರಾಜನ್, ವಸಂತನಗರದಲ್ಲಿರುವ ತಮ್ಮ ಪತ್ನಿ ವಿವಿಐಪಿ ಭದ್ರತಾ ಡಿಸಿಪಿ ಇಲಾ ರಾಜೇಶ್ವರಿ ಮನೆ ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ.

ips-officer-sitting-in-front-of-wifes-house-to-see-baby-face
ಕಲಬುರಗಿ ಎಸ್‌ಪಿ ಅರುಣ್ ರಂಗರಾಜನ್

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಐಪಿಎಸ್ ಅಧಿಕಾರಿಗಳಿಬ್ಬರು ಮಗುವಾದ ಬಳಿಕ ಮನಸ್ತಾಪದಿಂದ ದೂರವಾಗಿದ್ದು, ಮಗು ನೋಡಲು ಪತ್ನಿ ಬಿಡುತ್ತಿಲ್ಲ ಎಂದು ಆರೋಪಿಸಿ ಕಲಬುರಗಿ ಎಸ್‌ಪಿ ಅರುಣ್ ರಂಗರಾಜನ್, ವಸಂತನಗರದಲ್ಲಿರುವ ತಮ್ಮ ಪತ್ನಿ ವಿವಿಐಪಿ ಭದ್ರತಾ ಡಿಸಿಪಿ ಇಲಾ ರಾಜೇಶ್ವರಿ ಮನೆ ಮುಂದೆ ಧರಣಿ ಕುಳಿತಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಪೊಲೀಸರು ಅರುಣ್ ರಂಗರಾಜನ್ ಅವರ ಮನವೊಲಿಸಲು ಪ್ರಯತ್ನಿಸಿದರು. ಆದ್ರೆ, ರಂಗನಾಥ್ ಮಾತ್ರ ಪತ್ನಿ ಹೊರಗೆ ಬಂದು ಮಾತನಾಡಲಿ. ಮಕ್ಕಳೊಂದಿಗೆ ಮಾತನಾಡಲು ನೀಡಲಿ ಎಂದು ಒತ್ತಾಯಿಸಿದರು. ಅಲ್ಲದೆ ಕೆಲಸ ಮಾಡಲಾರದಷ್ಟು ಒತ್ತಡದ ವಾತಾವರಣ ನಿರ್ಮಾಣವಾಗಿದ್ದು, ನೆಮ್ಮದಿ ಇಲ್ಲ, ಮಕ್ಕಳನ್ನೂ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮಗು ಮುಖ ನೋಡಲು ಹೆಂಡತಿ ಮನೆ ಮುಂದೆ ಧರಣಿ ಕುಳಿತ ಐಪಿಎಸ್ ಅಧಿಕಾರಿ

ಘಟನೆ ಹಿನ್ನೆಲೆ:

ಕೆಲ ವರ್ಷಗಳ ಹಿಂದೆ ವಿವಿಐಪಿ ಭದ್ರತಾ ಡಿಸಿಪಿ ಇಲಾ ರಾಜೇಶ್ವರಿ ಹಾಗೂ ಕಲಬುರಗಿ ಐಎಸ್‌ಡಿ ಎಸ್‌ಪಿ ಅರುಣ್ ರಂಗರಾಜನ್ ಪ್ರೀತಿಸಿ ಮದುವೆ ಆಗಿದ್ದರು. ಚೆನ್ನಾಗಿಯೇ ನಡೆಯುತ್ತಿದ್ದ ಸಂಸಾರದಲ್ಲಿ ಒಂದು ಮಗುವಾದ ಮೇಲೆ ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಇಬ್ಬರೂ ಬೇರೆ ಬೇರೆ ಆಗಿದ್ದರು.ಬಳಿಕ ಮತ್ತೆ ಮಾತುಕತೆಯಿಂದ ಮರು ಮದುವೆಯಾಗುವ ನಿರ್ಧಾರ ಮಾಡಿದ್ದರು. ಇದಾದ ಬಳಿಕ ದಂಪತಿಗೆ ಮತ್ತೊಂದು ಹೆಣ್ಣು ಮಗು ಜನಿಸಿತ್ತು. ಆದರೆ, ಸ್ವಲ್ಪ ದಿನದಲ್ಲಿ ಇಲಾ ಅವರ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪತಿಯನ್ನು ಮನೆಗೆ ಬರದಂತೆ ನಿರ್ಬಂಧಿಸಿ, ಮಕ್ಕಳಿಂದ ದೂರ ಮಾಡಿದ್ದರು. ಇದರಿಂದ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಆರೋಪಿಸಿ ಪತ್ನಿ ಮನೆ ಎದುರು ಧರಣಿ ಕುಳಿತಿದ್ದರು.

For All Latest Updates

ABOUT THE AUTHOR

...view details