ಕರ್ನಾಟಕ

karnataka

ETV Bharat / city

ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಹೊಸ ಸಾಧನೆ: ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಗೂಡ್ಸ್ ರೈಲಿನಲ್ಲಿ ಬಸ್​ಗಳ ರವಾನೆ!

ಅಶೋಕ್ ಲೇ ಲ್ಯಾಂಡ್ ಉತ್ಪಾದನಾ ಘಟಕ ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಗೆ 300 ಬಸ್​ಗಳನ್ನು ತಯಾರಿಸಿ ಕೊಡುವ ಒಂಪ್ಪದ ಮಾಡಿಕೊಂಡಿದೆ. ಈ ಬಸ್​ಗಳನ್ನು ಹಿಮಾಚಲ ಪ್ರದೇಶಕ್ಕೆ ಗೂಡ್ಸ್​ ರೈಲುಗಳಲ್ಲಿ ಕಳುಹಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಬಸ್​ ಅನ್ನು ರೈಲ್​ನಲ್ಲಿ ಸಾಗಾಟ ಮಾಡಲಾಗುತ್ತದೆ.

By

Published : May 21, 2022, 10:08 PM IST

ದೊಡ್ಡಬಳ್ಳಾಪುರ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಬಸ್​ಗಳ ಸಾಗಣೆ ಮಾಡಲಾಗಿದೆ. ದೊಡ್ಡಬಳ್ಳಾಪುರದಿಂದ 2,825 ಕಿ.ಮೀ ದೂರದ ಚಂಡೀಗಢಕ್ಕೆ ಗೂಡ್ಸ್ ರೈಲಿನಲ್ಲಿ ಬಸ್​ಗಳ ಸಾಗಣೆ ಮಾಡಲಾಗಿದೆ. ಅಶೋಕ್ ಲೇ ಲ್ಯಾಂಡ್ ಉತ್ಪಾದನಾ ಘಟಕ ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಗೆ 300 ಬಸ್​ಗಳನ್ನು ತಯಾರಿಸಿ ಕೊಡುವ ಒಂಪ್ಪದ ಮಾಡಿಕೊಂಡಿದೆ. ತಮಿಳುನಾಡಿನ ಹೊಸೂರಿನಲ್ಲಿ ಬಸ್​ಗಳ ಚಾರ್ಸಿ ಸಿದ್ದವಾಗಿ ನೆಲಮಂಗಲ ಮಾಕಳಿ ಬಳಿ ಬಸ್​ಗಳ ಬಾಡಿಯನ್ನು ತಯಾರು ಮಾಡಲಾಗಿದೆ.

ಸಂಚಾರಕ್ಕೆ ಸಿದ್ದವಾದ ಬಸ್​ಗಳನ್ನು ದೂರದ ಹಿಮಾಚಲ ಪ್ರದೇಶಕ್ಕೆ ಕಳಿಸೋದು ದೊಡ್ಡ ಸವಾಲು ಆಗಿತ್ತು. ರಸ್ತೆಯ ಮೂಲಕ ಹೋದರೆ ಸಾಗಣೆ ವೆಚ್ಚವೇ ದುಬಾರಿಯಾಗುತ್ತಿತ್ತು. ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಗೂಡ್ಸ್ ರೈಲಿನಲ್ಲಿ ಬಸ್​ಗಳ ಸಾಗಣೆ ಮಾಡುವ ತಿರ್ಮಾನಕ್ಕೆ ಆಶೋಕ ಲೇ ಲ್ಯಾಂಡ್ ಮುಂದಾಗಿದೆ. ರೈಲ್ವೆ ಮೂಲಕ ಬಸ್ ಗಳ ಸಾಗಣೆ ಮಾಡುತ್ತಿರುವುದು ಭಾರತೀಯ ರೈಲ್ವೆಯಲ್ಲಿ ಇದೇ ಮೊದಲು, ಈ ಮೊದಲು ಟ್ರ್ಯಾಕ್ಟರ್ ದ್ವಿಚಕ್ರ ವಾಹನಗಳನ್ನು ಗೂಡ್ಸ್ ರೈಲುಗಳ ಸಾಗಣೆ ಮಾಡಲಾಗುತ್ತಿತ್ತು.

ದೊಡ್ಡಬಳ್ಳಾಪುರದಿಂದ ದೂರದ ಚಂಡೀಗಢಕ್ಕೆ ಸಾಗಣೆ ಮಾಡಲಾಗಿದೆ ಮೇ 15 ರಂದು 32 ಸಂಚಾರಿ ಬಸ್​ಗಳನ್ನು ಹೊತ್ತ ಗೂಡ್ಸ್ ರೈಲು ದೊಡ್ಡಬಳ್ಳಾಪುರದಿಂದ ಪ್ರಯಾಣ ಬೆಳಸಿದೆ. 6ನೇ ದಿನಕ್ಕೆ ಬಸ್​ಗಳು ಚಂಡೀಗಢವನ್ನು ತಲುಪಲಿವೆ. ಎರಡನೇ ರೈಲು ಮೇ 20 ರಂದು ಚಂಡೀಗಢಕ್ಕೆ ಪ್ರಯಾಣ ಬೆಳೆಸಿದೆ. 32 ಬಸ್​ಗಳ ಸಾಗಣೆಯಿಂದ ರೈಲ್ವೆ ಇಲಾಖೆಗೆ 23, 27,534, ಆದಾಯ ಬರಲಿದೆ. 300 ಬಸ್​ಗಳ ಸಾಗಣೆಯಿಂದ ರೈಲ್ವೆ ಇಲಾಖೆಗೆ ಕೋಟಿ ಕೋಟಿ ಆದಾಯ ಬರಲಿದೆ. ದೊಡ್ಡಬಳ್ಳಾಪುರ, ಯಲಹಂಕ, ವಿಜಯವಾಡ,ಭೂಪಾಲ್ ಮಾರ್ಗವಾಗಿ ಚಂಡೀಗಢವನ್ನು ಗೂಡ್ಸ್ ರೈಲು ಪ್ರಯಾಣ ಬೆಳೆಸಲಿದೆ.

ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಹೊಸ ಸಾಧನೆ

ಸಾಗಾಟಕ್ಕೆ ತೆಗೆದು ಕೊಂಡ ಕ್ರಮ: ಬಹುತೇಕ ರೈಲ್ವೆ ಮಾರ್ಗಗಳು ವಿದ್ಯುದೀಕರಣ ಆಗಿದ್ದರಿಂದ ಬಸ್​ಗಳಿಗೆ ಲೈನ್​ ತಾಗದಂತೆ ಮಾಡಲು ಟಯರ್​ಗಳ ಗಾಳಿ ತೆಗೆದು ಎತ್ತರವನ್ನು ಕಮ್ಮಿ ಮಾಡಲಾಗಿದೆ. ಸುರಮಗ ಅಂಡರ್​ ಪಾಸ್​ಗಳನ್ನು ಬಿಟ್ಟು ಸೂಕ್ತ ಮಾರ್ಗವನ್ನೂ ಸಾಗಣೆಗೆ ಬಳಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಬಸ್​ಗಳ ಬಿಡಿಭಾಗ ಕಳವಾಗದಂತೆ ನೋಡಿಕೊಳ್ಳಲು ಸೆಕ್ಯೂರಿಟಿ ಗಾರ್ಡ್​ಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಪೆಟ್ರೋಲ್​, ಡೀಸೆಲ್​ ಕೊಡುಗೆ ಜೊತೆಗೆ ಗ್ಯಾಸ್​ ಸಿಲಿಂಡರ್​ಗಳಿಗೆ ₹200 ಸಬ್ಸಿಡಿ ಘೋಷಣೆ

ABOUT THE AUTHOR

...view details