ಕರ್ನಾಟಕ

karnataka

ETV Bharat / city

ನಾನು ಯಾವುದೇ ಕಾರಣಕ್ಕೂ ಜೆಡಿಎಸ್​​​​ ಪಕ್ಷ ಬಿಡಲ್ಲ: ಶಿವರಾಮೇಗೌಡ - ಡಿಕೆಶಿ ಜಾಮೀನು ಅರ್ಜಿ ವಜಾ

ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡಲ್ಲ. ಜೆಡಿಎಸ್​ನಲ್ಲೇ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.

Shivaramegowda

By

Published : Sep 26, 2019, 1:24 AM IST

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡಲ್ಲ. ಜೆಡಿಎಸ್​ನಲ್ಲೇ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.

ಖಾಸಗಿ ಹೋಟೆಲ್​ಗೆ ಶಿವರಾಮೇಗೌಡ ಭೇಟಿ

ಕಾಂಗ್ರೆಸ್ ನಾಯಕರು ಸೇರಿದ್ದ ನಗರದ ಅರಮನೆ ರಸ್ತೆಯ ಖಾಸಗಿ ಹೋಟೆಲ್​ಗೆ ಭೇಟಿ ನೀಡಿ ವಾಪಸ್​ ಆಗುವ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ಇಲ್ಲಿ ಎನು ನಡೆಯುತ್ತಿದೆ ಅಂತ ಗೊತ್ತಿಲ್ಲ. ಇಲ್ಲಿಗೆ ನಾನು ಯಾವಾಗಲೂ ಭೇಟಿ ನೀಡುತ್ತಿರುತ್ತೇನೆ. ನನ್ನ ಸ್ನೇಹಿತರನ್ನ ಭೇಟಿ ಮಾಡೋದಿದ್ರೆ ಇಲ್ಲಿಗೆ ಬರುತ್ತೇನೆ. ಇಲ್ಲಿಗೆ ಬಂದಾಗ ಕಾಂಗ್ರೆಸ್ ನಾಯಕರು ಇದ್ದರು. ಹಾಯ್ ಹೇಳಿದೆ ಅಷ್ಟೇ. ದಿನೇಶ್ ಗುಂಡೂರಾವ್ ಸೇರಿದಂತೆ​ ಎಲ್ಲರೂ ಇದ್ರು. ಅವರನ್ನು ಮಾತನಾಡಿಸಿದೆ ಅಷ್ಟೆ ಎಂದರು.

ನಾಗಮಂಗಲದಿಂದ ಜೆಡಿಎನ್​ನಲ್ಲಿ ಉಳಿದುಕೊಂಡೇ ಹೋರಾಟ ಮಾಡುತ್ತೇನೆ. ನಾವು ಪಕ್ಷದಿಂದ ಸ್ವತಂತ್ರವಾಗಿ ಅಭ್ಯರ್ಥಿಗಳನ್ನ ಹಾಕುತ್ತೇವೆ. ನಾವು ಕಳೆದುಕೊಂಡ ಮೂರಕ್ಕೆ ಮೂರು ಕ್ಷೇತ್ರಗಳನ್ನ ಗೆಲ್ಲುತ್ತೇವೆ ಎಂದರು.

ಇನ್ನು ಡಿಕೆಶಿ ಜಾಮೀನು ಅರ್ಜಿ ವಜಾ ವಿಚಾರದ ಬಗ್ಗೆ ಮಾತನಾಡಿ, ಉದ್ದೇಶಪೂರ್ವಕವಾಗಿ ಬಿಜೆಪಿಯವರು ಒತ್ತಡ ತಂದು ಇಡಿಯಿಂದ ಹೀಗೆ ಮಾಡಿಸುತ್ತಾ ಇದ್ದಾರೆ. ನಾವು ಉಚ್ಚ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕುತ್ತೇವೆ ಎಂದರು.

ABOUT THE AUTHOR

...view details