ಕರ್ನಾಟಕ

karnataka

ETV Bharat / city

ಐಎಸ್​ಡಿ ನೋಟಿಸ್ ನೋಡಿ ಆಶ್ಚರ್ಯ ಆಯ್ತು; ನಟ ಯೋಗಿ - ಸ್ಯಾಂಡಲ್​ವುಡ್​ ಡ್ರಗ್ಸ್

ಐಎಸ್​ಡಿ ಅಧಿಕಾರಿಗಳು ನನಗೆ ನೋಟಿಸ್ ಕೊಟ್ಟಿರೋದು ಆಶ್ಚರ್ಯ ತಂದಿದೆ. ನಾನು ಯಾವ ತಪ್ಪೂ ಮಾಡಿಲ್ಲ. ಸದ್ಯ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ರಾಗಿಣಿ ದ್ವಿವೇದಿ, ಹಾಗೂ ಸಂಜನಾ ಗರ್ಲಾನಿ ಮಾತ್ರ ನನಗೆ ಪರಿಚಯ ಇದ್ದಾರೆ. ಇನ್ನು 2011, 2012ರ ನಂತರ ಹೆಚ್ಚು ಪಾರ್ಟಿಗಳಿಗೆ ಹೋಗಿಲ್ಲ. ಕೆಲವೊಮ್ಮೆ ಮಾತ್ರ ಮದ್ಯಪಾನ, ಧೂಮಪಾನ ಮಾಡುತ್ತಿದ್ದೆ ಅಷ್ಟೇ. ಈಗ ಅದನ್ನು ಕೂಡ ಬಿಟ್ಟು ಬಿಟ್ಟಿದ್ದೇನೆ ಎಂದು ಲೂಸ್ ಮಾದ ಖ್ಯಾತಿಯ ಯೋಗಿ ಹೇಳಿದ್ದಾರೆ.

Yogeesh
ಲೂಸ್ ಮಾದ ಯೋಗಿ

By

Published : Sep 22, 2020, 3:51 PM IST

ಬೆಂಗಳೂರು: ಸ್ಯಾಂಡಲ್​ವುಡ್​​​ನಲ್ಲಿ​ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಹಾಗೂ ಪಾರ್ಟಿ ಆಯೋಜಕರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಜೊತೆಗೆ ಐಎಸ್​ಡಿ ಕೂಡಾ ತನಿಖೆಗೆ ಇಳಿದಿದೆ.

ಎಲ್ಲೆಲ್ಲಿ ಪಾರ್ಟಿಗಳು ಆಯೋಜಿಸಲಾಗುತ್ತಿತ್ತು. ಯಾರೆಲ್ಲ ಭಾಗವಹಿಸಿದ್ದರು ಎಂಬುದನ್ನು ನೋಡಿಕೊಂಡು ನೋಟಿಸ್ ನೀಡಿ ವಿಚಾರಣೆ ಮಾಡಲಾಗುತ್ತಿದೆ. ಈ ವಿಷಯವಾಗಿ ಲೂಸ್ ಮಾದ ಯೋಗಿಗೂ ಆಂತರಿಕ ಭದ್ರತಾ ವಿಭಾಗ(ಐಎಸ್​ಡಿ) ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಲೂಸ್ ಮಾದ ಯೋಗಿ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಎರಡು ಗಂಟೆಗಳ ಕಾಲ‌‌ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಲೂಸ್ ಮಾದ ಯೋಗಿಯನ್ನು ವಿಚಾರಣೆ ನಡೆಸಿದ್ದಾರೆ.

ಐಎಸ್​ಡಿ ವಿಚಾರಣೆ ಕುರಿತು ಯೋಗಿ ಮಾತು

ಈ ಬಗ್ಗೆ ಇಂದು ಕೋಣನಕುಂಟೆ ನಿವಾಸದಲ್ಲಿ ಲೂಸ್ ಮಾದ ಯೋಗಿ ಮಾತನಾಡಿದ್ದಾರೆ‌. ಐಎಸ್​ಡಿ ಅಧಿಕಾರಿಗಳು ನನಗೆ ನೋಟಿಸ್ ಕೊಟ್ಟಿರೋದು ಆಶ್ಚರ್ಯ ಆಯ್ತು. ನಾನು ಯಾವ ತಪ್ಪೂ ಮಾಡಿಲ್ಲ. ಸದ್ಯ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ರಾಗಿಣಿ ದ್ವಿವೇದಿ, ಹಾಗೂ ಸಂಜನಾ ಗರ್ಲಾನಿ ಮಾತ್ರ ನನಗೆ ಪರಿಚಯ ಇದ್ದಾರೆ. ಇನ್ನು 2011, 2012ರ ನಂತರ ಹೆಚ್ಚು ಪಾರ್ಟಿಗಳಿಗೆ ಹೋಗಿಲ್ಲ. ಕೆಲವೊಮ್ಮೆ ಮಾತ್ರ ಮದ್ಯಪಾನ, ಧೂಮಪಾನ ಮಾಡುತ್ತಿದ್ದೆ ಅಷ್ಟೇ. ಈಗ ಅದನ್ನು ಕೂಡ ಬಿಟ್ಟು ಬಿಟ್ಟಿದ್ದೇನೆ ಎಂದರು.

ಇನ್ನು ರಾಗಿಣಿ ಜೊತೆಗಿನ ಪರಿಚಯದ ಬಗ್ಗೆ ಮಾತನಾಡಿದ ಯೋಗಿ, 2013ರಲ್ಲಿ ಒಂದು ಸಿನಿಮಾ ಮಾಡಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿವರೆಗೂ ನಾನು ರಾಗಿಣಿ ಜೊತೆ ಸಂಪರ್ಕದಲ್ಲಿ ಇಲ್ಲ. ಜೊತೆಗೆ ನನಗೆ ಒಬ್ಬನಿಗೆ ಮಾತ್ರ ಅಲ್ಲ. 15 ರಿಂದ 20 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ನಿನ್ನೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೇನೆ. ನಾನು ಯಾವ ಶ್ರೀಲಂಕಾ ಪಾರ್ಟಿಗೂ ಹೋಗೇ ಇಲ್ಲ. ಯಾಕೆಂದರೆ ನನ್ನ ಪಾಸ್ ಪೋರ್ಟ್ ಅವಧಿ ಮುಗಿದು ಒಂದು ವರ್ಷ ಆಗಿದೆ ಎಂದಿದ್ದಾರೆ ಯೋಗಿ.

ಲೂಸ್ ಮಾದ ಯೋಗಿ

ಇನ್ನು ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲ ಇದೆ ಎಂದು ಹೇಳುವುದು ಬೇಡ. ಯಾರೋ ಒಬ್ಬರು ಮಾಡೋ ಕೆಲಸಕ್ಕೆ ಪೂರ್ತಿ ಚಿತ್ರರಂಗವನ್ನು ಕೈ ಮಾಡಿ ತೋರಿಸೋದು ಸಲ್ಲದು ಎಂದು ಯೋಗಿ ಹೇಳಿದರು. ಇದರ ಜೊತೆಗೆ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿರುವ ಡ್ರಗ್ಸ್ ಪೆಡ್ಲರ್​ಗಳು ಯಾರ್ಯಾರು ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಮಾಧ್ಯಮಗಳಲ್ಲಿ ತೋರಿಸಿದಾಗ ಮಾತ್ರ ಗೊತ್ತಾಯ್ತು. ಆದರೆ ಈ ಡ್ರಗ್ಸ್ ಮಾಫಿಯಾಗೂ ನನಗೂ ಯಾವುದೇ ಸಂಬಂಧ ಇಲ್ಲ. ನನಗೂ ಹೆಂಡತಿ ಹಾಗೂ ಮಗಳು ಇದ್ದಾಳೆ ಎಂದು ಯೋಗಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details