ಕರ್ನಾಟಕ

karnataka

ETV Bharat / city

ಕೊರೊನಾ ಪರೀಕ್ಷೆ ಅಲ್ರೀ... ದೇಹದ ಉಷ್ಣಾಂಶ ಪರೀಕ್ಷೆ ಅಷ್ಟೆ: ಮಾಧ್ಯಮಗಳ ವರದಿಗೆ ಸಿದ್ದರಾಮಯ್ಯ ಸ್ಪಷ್ಟನೆ - ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ತಾವು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾಗ ಹಬ್ಬಿದ್ದ ಸುದ್ದಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನಿಡಿದ್ದು, ತಾವು ದೇಹದ ಉಷ್ಣತೆ ಪರೀಕ್ಷೆ ಮಾಡಿಸಿಕೊಂಡಿದ್ದಾಗಿ ಟ್ವೀಟ್​ ಮಾಡಿದ್ದಾರೆ.

I have not tested for corona infection: Siddaramaiah clarification
ನಾನು ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

By

Published : Mar 19, 2020, 1:55 PM IST

ಬೆಂಗಳೂರು: ತಾವು ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದಾಗಿ ಮಾಧ್ಯಮಗಳಲ್ಲಿ ಬಂದ ವರದಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನಾನು ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೆಲವು ಪತ್ರಿಕೆಗಳ ವರದಿಯಂತೆ ನಾನು ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿಲ್ಲ, ಅದು ದೇಹದ ಉಷ್ಣಾಂಶ ಪರೀಕ್ಷೆ ಅಷ್ಟೆ ಎಂದಿದ್ದಾರೆ. ಜ್ವರ, ಶೀತ, ಕೆಮ್ಮು ಇದ್ದವರು ತಕ್ಷಣ ವೈದ್ಯರ ಬಳಿ ಹೋಗಿ. ಅನುಮಾನ ಬಂದರೆ ಆರೋಗ್ಯ ಇಲಾಖೆ ಸಂಪರ್ಕಿಸಿ. ಸರಿಯಾದ ಕ್ರಮದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಾಗೃತಿ ಸಂದೇಶವನ್ನು ಕೂಡ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.

ನಿನ್ನೆ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ವಿಧಾನಸೌಧದ ಕೆಂಗಲ್ ಪ್ರವೇಶದ್ವಾರದಲ್ಲಿ ಸಿದ್ದರಾಮಯ್ಯ ಥರ್ಮಲ್ ಸ್ಕ್ರೀನಿಂಗ್ ಯಂತ್ರದ ಮೂಲಕ ದೇಹದ ಉಷ್ಣಾಂಶದ ಪರೀಕ್ಷೆ ಮಾಡಿಸಿಕೊಂಡಿದ್ದರು.

ABOUT THE AUTHOR

...view details