ಬೆಂಗಳೂರು: ನಿಯಮ 60ರ ಅಡಿಯಲ್ಲಿ ಶೇ. 40 ರಷ್ಟು ಕಮಿಷನ್ ಆರೋಪದ ಮೇಲೆ ಚರ್ಚೆಗೆ ಅವಕಾಶ ನೀಡುವ ವಿಚಾರವಾಗಿ ನಡೆದ ಜಟಾಪಟಿ ವೇಳೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಕಮಿಷನ್ ಆರೋಪದ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ ಎಂದು ವ್ಯಂಗ್ಯವಾಡಿದರು.
ಸದನದಲ್ಲಿ ರಾಮ ಜಪ.. ಮನೆ ದೇವರ ಬಗ್ಗೆ ಸ್ವಾರಸ್ಯಕರ ಚರ್ಚೆ - ಸದನದಲ್ಲಿ ಮನೆ ದೇವರ ಬಗ್ಗೆ ಸ್ವಾರಸ್ಯಕರ ಚರ್ಚೆ
ಕಲಾಪ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯ ಪ್ರವೇಶಕ್ಕೆ ಎದ್ದು ನಿಂತಾಗ 'ಒಂದು ನಿಮಿಷ ಸಾರ್, ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ವ್ಯಂಗ್ಯವಾಡಿದರು.
ಸದನದಲ್ಲಿ ರಾಮ ಜಪ..
ಆಗ ಸಚಿವ ಸುಧಾಕರ್, ನಿಮ್ಮ ಮನೆ ದೇವ್ರು ಯಾವ್ದು? ಎಂದು ಪ್ರಶ್ನಿಸಿದರು. ಅದಕ್ಕೆ ಸಚಿವ ಮಾಧುಸ್ವಾಮಿ, ಸಿದ್ದರಾಮೇಶ್ವರ ಎಂದು ಉತ್ತರಿಸಿದರು. ಆಗ ಸಿದ್ದರಾಮಯ್ಯ, ನಮ್ಮ ಮನೆ ದೇವ್ರು ಸಿದ್ದರಾಮೇಶ್ವರ. ನಮ್ಮ ಅಪ್ಪನ ಹೆಸ್ರು ಸಿದ್ದರಾಮೇಗೌಡ. ನಮ್ಮ ಊರು ಹೆಸ್ರು ಸಿದ್ದರಾಮನಹುಂಡಿ. ನಮ್ಮ ಮನೆ ದೇವ್ರು ಸಿದ್ದರಾಮೇಶ್ವರ ಎಂದರು. ಆಗ ಸಚಿವ ಆರ್.ಅಶೋಕ್, ಎಲ್ಲಾ ರಾಮ.. ರಾಮ.. ರಾಮ.. ರಾಮ ಎಂದು ಹೇಳುವ ಮೂಲಕ ಸದನವನ್ನು ನಗೆಗಡಲಲ್ಲಿ ತೇಲಿಸಿದರು.
ಇದನ್ನೂ ಓದಿ:ಶೇ.40 ಕಮಿಷನ್ ಆರೋಪ ಮೇಲೆ ಚರ್ಚೆಗೆ ಅವಕಾಶ ನಿರಾಕರಣೆ : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ