ಕರ್ನಾಟಕ

karnataka

ETV Bharat / city

ಹೋಂ ಐಸೋಲೇಷನ್ ಸೌಲಭ್ಯ ಇಲ್ಲದಿದ್ದರೆ ಸಿಸಿಸಿ ಕೇಂದ್ರಕ್ಕೆ ದಾಖಲು ಕಡ್ಡಾಯ: ಬಿಬಿಎಂಪಿ - ಬೆಂಗಳೂರಿನಲ್ಲಿ ಹೋಮ್ ಐಸೋಲೇಷನ್ ನಿಯಮ

ಹೋಂ ಐಸೋಲೇಷನ್, ಹೋಂ ಕೇರ್‌ನಲ್ಲಿ ಸೌಲಭ್ಯಗಳು ಲಭ್ಯವಿಲ್ಲದೇ ಇದ್ದಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲಿಸಲು ಬಿಬಿಎಂಪಿ ಸೂಚಿಸಿದೆ.

home-isolation-rules-from-bbmp
ಹೋಂ ಐಸೋಲೇಷನ್ ಸೌಲಭ್ಯ ಇಲ್ಲದಿದ್ದರೆ ಸಿಸಿಸಿ ಕೇಂದ್ರಕ್ಕೆ ದಾಖಲು ಕಡ್ಡಾಯ: ಬಿಬಿಎಂಪಿ

By

Published : May 22, 2021, 12:22 AM IST

ಬೆಂಗಳೂರು: ಹೋಮ್​​ ಐಸೋಲೇಷನ್ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ಇನ್ಮುಂದೆ ಸರಿಯಾದ ಸೌಲಭ್ಯಗಳು ಮನೆಯಲ್ಲಿ ಇಲ್ಲದೇ ಹೋದಲ್ಲಿ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸುವುದನ್ನು ಕಡ್ಡಾಯ ಮಾಡಿ ಬೆಂಗಳೂರು ಮಹಾನಗರ ಪಾಲಿಕೆ ಆದೇಶಿಸಿದೆ.

ಬಿಬಿಎಂಪಿಯ ವಿಶೇಷ ಆಯುಕ್ತರು ( ಆರೋಗ್ಯ) ಅವರ ಸುತ್ತೋಲೆಯನ್ವಯ ಪಾಲಿಕೆಯ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್, ಹೋಂ ಕೇರ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ಸೌಲಭ್ಯಗಳಿದ್ದಲ್ಲಿ ಮಾತ್ರ ಹೋಮ್ ಐಸೋಲೇಷನ್, ಹೋಂ ಕೇರ್‌ನಲ್ಲಿರುವ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬಹುದಾಗಿರುತ್ತದೆ.

ಹೋಮ್ ಐಸೋಲೇಷನ್​/ಹೋಂ ಕೇರ್‌/ ಮನೆ ಹೀಗಿರಬೇಕು..

  • ಸೋಂಕಿತರಿರುವ ಮನೆಯಲ್ಲಿ ಉತ್ತಮ ಗಾಳಿ ವ್ಯವಸ್ಥೆ, ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ಶೌಚಾಲಯ ಹೂಂದಿರಬೇಕು.
  • ಸೋಂಕಿತರು ಮನೆಯ ಇತರ ವ್ಯಕ್ತಿಗಳಿಂದ (ವಿಶೇಷವಾಗಿ ವಯಸ್ಸಾದವರು, ಅಧಿಕ ರಕ್ತದೊತ್ತಡ, ಹೃದಯ ರಕ್ತನಾಳದ ಖಾಯಿಲೆ, ಮೂತ್ರಪಿಂಡ ಖಾಯಿಲೆ ಮತ್ತು ಕೋಮಾರ್ಬಿಡ್ ಪರಿಸ್ಥಿತಿ ಇರುವವರು) ದೂರವಿರಬೇಕು.

ಇದನ್ನೂ ಓದಿ:ಕೊರೊನಾ ಔಷಧಿ ಮಾರೋದಾಗಿ ವೆಬ್​ಸೈಟ್​ ಮೂಲಕ ವಂಚನೆ, ಸಿಸಿಬಿ ಪೊಲೀಸರ ಮೇಲೆಯೇ ಹಲ್ಲೆ

ಹೋಂ ಐಸೋಲೇಷನ್, ಹೋಂ ಕೇರ್‌ನಲ್ಲಿ ಈ ಸೌಲಭ್ಯಗಳು ಲಭ್ಯವಿಲ್ಲದೇ ಇದ್ದಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲಿಸಲು ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ವಿಶೇಷ ಆಯುಕ್ತರು (ಆರೋಗ್ಯ) ಸೂಚಿಸಿದ್ದಾರೆ.

ABOUT THE AUTHOR

...view details