ದೇವನಹಳ್ಳಿ(ಬೆಂಗಳೂರು): ತಾಲೂಕಿನ ಕೊಯಿರಾ ಗ್ರಾಮದಲ್ಲಿ ಅಪರೂಪದ ಆನೆ ಬೇಟೆಯ ಪ್ರಾಚೀನ ವೀರಗಲ್ಲನ್ನು ಇತಿಹಾಸ ಅನ್ವೇಷಕ ಬಿಟ್ಟಸಂದ್ರ ಗುರುಸಿದ್ದಯ್ಯ ಪತ್ತೆ ಮಾಡಿದ್ದಾರೆ. ಶಾಸಕ ನಿಸರ್ಗ ನಾರಾಯಣ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವನಹಳ್ಳಿಯಲ್ಲಿ ಆನೆ ಬೇಟೆಯ ವೀರಗಲ್ಲು ಪತ್ತೆ, ಶಾಸಕ ನಿಸರ್ಗ ನಾರಾಯಣ ಸ್ವಾಮಿ ಭೇಟಿ ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದ ಕೆ.ಸಿ ರಾಮಯ್ಯ ಎಂಬುವವರ ಹೊಲದಲ್ಲಿ 12ನೇ ಶತಮಾನದ ಅಪರೂಪ ವೀರಗಲ್ಲನ್ನು ಬಿಟ್ಟಸಂದ್ರ ಗುರುಸಿದ್ದಯ್ಯ ಪತ್ತೆ ಮಾಡಿದ್ದಾರೆ. ಇದು 6 ಅಡಿ ಅಗಲ, 5 ಅಡಿ ಎತ್ತರ ಮುಕ್ಕಾಲು ಅಡಿ ದಪ್ಪದ ಗ್ರಾನೈಟ್ ಶಿಲೆಯದ್ದಾಗಿದೆ.
ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲಿ ಪತ್ತೆಯಾದ ವೀರಗಲ್ಲು ಮದಿಸಿದ ಆನೆ ಈ ಪ್ರದೇಶದಲ್ಲಿ ಪುಂಡಾಟಿಕೆ ನಡೆಸುತ್ತಿದ್ದಾಗ ವೀರ ತನ್ನ ಬೇಟೆ ನಾಯಿಗಳ ಸಹಾಯದಿಂದ ಆನೆಯ ಮೇಲೆ ಎರಗಿದ್ದಾನೆ. ಆನೆ ದಾಳಿಗೆ ವೀರ ಮಡಿದಿದ್ದಾನೆ. ವೀರನ ನೆನಪಿಗಾಗಿ ವೀರಗಲ್ಲನ್ನು ಕೆತ್ತಿಸಲಾಗಿದೆ. ಸ್ಥಳಕ್ಕೆ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಭೇಟಿ ನೀಡಿ ವೀರಗಲ್ಲಿನ ಮಹತ್ವವನ್ನ ತಿಳಿದುಕೊಂಡು ಶಾಸನ ಮತ್ತು ವೀರಗಲ್ಲುಗಳ ರಕ್ಷಣೆ ಅಗತ್ಯವೆಂದು ಹೇಳಿದರು.
ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲಿ ಪತ್ತೆಯಾದ ವೀರಗಲ್ಲು ಇದನ್ನೂ ಓದಿ:ನಾವು ಕಾಂಗ್ರೆಸ್ಗೆ ಡಿವೋರ್ಸ್ ಕೊಟ್ಟಿದ್ದೇವೆ, ಮತ್ತೆ ಒಂದಾಗಲ್ಲ: ಬಿ.ಸಿ ಪಾಟೀಲ್