ಕರ್ನಾಟಕ

karnataka

ETV Bharat / city

ಖಾಸಗಿ ಆಸ್ಪತ್ರೆಯಿಂದ ಹೆಚ್ಚಿನ ದರ ವಸೂಲಿ: ಕೊನೆಗೂ ನೋಟಿಸ್ ನೀಡಿದ ಆರೋಗ್ಯ ಇಲಾಖೆ

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ದೂರುಗಳು ಕೇಳಿ ಬಂದ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳಿಗೆ ನ್ಯಾಷನಲ್ ಹೆಲ್ತ್‌ ಮಿಷನ್‌ ಡೈರೆಕ್ಟರ್ ನೋಟಿಸ್​ ನೀಡಿದೆ.

health-department-gave-notice-to-private-hospital
ಖಾಸಗಿ ಆಸ್ಪತ್ರೆಗಳ ದುಬಾರಿ ದರ ವಸೂಲಿ

By

Published : Jul 6, 2020, 8:57 PM IST

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿದ್ದ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳಿಗೂ ಅನುವು ಮಾಡಿಕೊಡಲಾಗಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣದಿಂದಾಗಿ ಎರಡು ವಲಯದಲ್ಲೂ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿ, ಅದಕ್ಕೆ ತಕ್ಕ ದರ ಪಟ್ಟಿ ನಿಗದಿ ಮಾಡಲಾಗಿದೆ. ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೇ ಅನ್ನದೆ ಹಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಣ ಲೂಟಿ ಮಾಡೋ ಕೆಲಸಕ್ಕೆ ಇಳಿದಿರುವ ದೂರುಗಳು ಕೇಳಿ ಬಂದಿವೆ‌‌.

ನಗರದಲ್ಲಿ ಎಷ್ಟಿವೆ ಖಾಸಗಿ ಆಸ್ಪತ್ರೆಗಳು- ಲಭ್ಯವಿರುವ ಹಾಸಿಗೆಗಳಷ್ಟು?

ನಗರದಾದ್ಯಂತ ಒಟ್ಟು 72 ಖಾಸಗಿ ಆಸ್ಪತ್ರೆಗಳಲ್ಲಿ 3331 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಈವರೆಗೆ 733 ಹಾಸಿಗೆಗಳು ಭರ್ತಿಯಾಗಿದ್ದು, ಇನ್ನೂ 2598 ಹಾಸಿಗೆಗಳು ಖಾಲಿ ಇವೆ. ಶೇ. 78ರಷ್ಟು ಹಾಸಿಗೆಗಳು ಖಾಲಿ ಇವೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಇಲ್ಲವೆಂದು ಅಂಕಿ-ಅಂಶಗಳ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳ ವಿವರ
ಖಾಸಗಿ ಆಸ್ಪತ್ರೆಗಳ ವಿವರ
ಇತ್ತ ಖಾಸಗಿ ಆಸ್ಪತ್ರೆಗಳ ವಸೂಲಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಹಾಗಿಲ್ಲ. ಆರೋಗ್ಯ ಮತ್ತು ಕುಟುಂಬ ಇಲಾಖೆಯ ವ್ಯಾಪ್ತಿಗೂ ಬರುವುದರಿಂದ ಅಲ್ಲಿನ ಅಧಿಕಾರಿಗಳೊಂದಿಗೂ ಮಾತಾಡಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.ಹೆಚ್ಚುವರಿ ಹಣ ವಸೂಲಿ: ಅಪೋಲೊ ಆಸ್ಪತ್ರೆಗೆ ನೋಟಿಸ್‌

ಕೋವಿಡ್ ಟೆಸ್ಟ್​ಗೆ ಹೆಚ್ಚುವರಿ ಶುಲ್ಕ‌ ಪಡೆದ ಹಿನ್ನೆಲೆ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿರುವ 4500 ರೂ. ಬದಲು 6000 ರೂ. ಬಿಲ್ ಪ್ರತಿಯೊಂದಿಗೆ ನೋಟಿಸ್ ನೀಡಿರೋ ನ್ಯಾಷನಲ್ ಹೆಲ್ತ್‌ ಮಿಷನ್‌ ಡೈರೆಕ್ಟರ್, ಈ ಕುರಿತು 2 ದಿನಗಳೊಳಗಾಗಿ ವಿವರಣೆ ನೀಡುವಂತೆ ಖಡಕ್ ಎಚ್ಚರಿಕೆ ನೀಡಿದೆ.‌ ಉತ್ತರ‌ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಸಹ ನೀಡಿದೆ.

ನ್ಯಾಷನಲ್ ಹೆಲ್ತ್‌ ಮಿಷನ್‌ ಡೈರೆಕ್ಟರ್ ನೋಟಿಸ್​​
ಹಾಸಿಗೆಗಳು ಖಾಲಿ ಇವೆ... ವೈದ್ಯರೇ ಇಲ್ಲ:ಎಲ್ಲಾ ಆಸ್ಪತ್ರೆಗಳು ಬೆಡ್ ಕೊರತೆ ಅಂತ ಚಿಕಿತ್ಸೆ ನೀಡಲು ತಡ ಮಾಡುತ್ತಿವೆ. ಇದಕ್ಕೆ ಕಾರಣ ವೈದ್ಯರ ಕೊರತೆ. ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ಗೊತ್ತಿರುವ ವಿಷಯವೇ.‌ ಹೀಗಾಗಿಯೇ ಕೊರೊನಾ ಟೈಂನಲ್ಲಿ ವಯೋಸಹಜ ನಿವೃತ್ತಿ ಹೊಂದುತ್ತಿರುವವರ ಟೈಂ ಲೈನ್ ವಿಸ್ತರಿಸಲಾಗಿದೆ.

ಇತ್ತ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಾರೆ. ಹೊಸಬರು ಬರಲು ಹಿಂದೇಟು ಹಾಕುತ್ತಿದ್ದಾರೆ.‌ ಈ ಬಗ್ಗೆ ವೈದ್ಯರೇ ಟ್ವೀಟ್​ ಕೂಡ ಮಾಡಿದ್ದಾರೆ.‌ ವೈದ್ಯರು ಕೊರೊನಾ ಆತಂಕಕ್ಕೆ ಒಳಗಾಗಿದ್ದು, ಅದರಲ್ಲೂ ಹಲವೆಡೆ ವೈದ್ಯರಿಗೆ ಕೊರೊನಾ ಕಾಣಿಸಿಕೊಂಡಿದೆ ಎಂಬ ಸುದ್ದಿಗಳನ್ನೇ ಕೇಳಿಯೇ ಕೊರೊನಾ‌ ಚಿಕಿತ್ಸೆ ನೀಡಲು ಬರುತ್ತಿಲ್ಲ.‌ ಇವೆಲ್ಲ ಕಾರಣದಿಂದ ಸೋಂಕಿತರು ನರಳುವಂತಾಗಿದೆ.

ABOUT THE AUTHOR

...view details